Ad Widget

ಸಾಮಾಜಿಕ ಅರಣ್ಯ ಇಲಾಖೆಯಿಂದ ಉಚಿತವಾಗಿ ವಿವಿಧ ಜಾತಿಯ ಗಿಡ ಲಭ್ಯ

ಸುಳ್ಯ ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಅಲೆಟ್ಟಿ ಮೇದಿನಡ್ಕ ಸಸ್ಯಕ್ಷೇತ್ರದಲ್ಲಿ 2020 ರ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಸಂಘ- ಸಂಸ್ಥೆಗಳಿಗೆ ಮತ್ತು ಕೃಷಿ ವಿತರಣೆ ಮಾಡುವ ಸಲುವಾಗಿ ವಿವಿಧ ರೀತಿಯ ಒಟ್ಟು 25500 ಸಸಿಗಳನ್ನು ಬೆಳೆಸಲಾಗಿದೆ . ಅಲ್ಲದೆ ನೆಡುತೋಪಿನಲ್ಲಿ ನೆಡಲು 17820 ಸಸಿಗಳನ್ನು ಮತ್ತು ರಸ್ತೆ ಬದಿ ನೆಡುತೋಪು ನಿರ್ಮಾಣಕ್ಕಾಗಿ 3515 ಸಸಿಗಳನ್ನು , ಶಾಲಾ ಆವರಣದಲ್ಲಿ ನೆಡಲು 1690 ಸಸಿಗಳನ್ನು ಬೆಳೆಸಲಾಗಿದೆ . ನರೇಗಾ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 2000 ಕಸಿಗೇರು ಗಿಡಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಜೊತೆಗೆ ನಾಟಿ ಮಾಡಲು ಕೂಲಿ ಪಾವತಿಯನ್ನು ನರೇಗಾ ಯೋಜನೆಯಡಿ ಇಲಾಖಾ ಮೂಲಕ ಪಾವತಿಸಲಾಗುತ್ತದೆ . ಸಾರ್ವಜನಿಕರಿಗೆ ವಿತರಣೆ ಮಾಡುವ ಸಲುವಾಗಿ ಮಹಾಗನಿ , ಸಾಗುವಾನಿ , ಪುರ್ನಪುಳಿ , ಬಿಲ್ವಪತ್ರ , ರಾಮಪತ್ರೆ ಹಲಸು , ಹೆಬ್ಬಲಸು , ನೇರಳೆ , ಬಾದಾಮಿ , ಮಾವು , ಉಂಡೆಹುಳಿ , ಮಂತುಹುಳಿ , ರೆಂಜೆ , ಸಂಪಿಗೆ , ನೆಲ್ಲಿ , ಪೇರಳೆ , ನಕ್ಷತ್ರಹಣ್ಣು , ಕಹಿಬೇವು , ರಮಬೋಟನ್ , ಶ್ರೀಗಂಧ , ಶಾಂತಿ , ದಾಳಿಂಬೆ , ಅಶೋಕ , ಅಂಟುವಾಳ ಇತ್ಯಾದಿ ಜಾತಿಯ ಸಸಿಗಳನ್ನು ಬೆಳೆಸಲಾಗಿದ್ದು ಅರ್ಹ ಕೃಷಿಕರು ರಿಯಾಯಿತಿ ದರದಲ್ಲಿ ಸಸಿಗಳನ್ನು ವಲಯ ಅರಣ್ಯಾಧಿಕಾರಿಯವರ ಕಛೇರಿ , ಸಾಮಾಜಿಕ ಅರಣ್ಯ ವಲಯ ಸುಳ್ಯ ಅಂಬಟೆಡ್ಕ ಇಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!