Ad Widget

ದೇಶದಲ್ಲಿ ಮಾರಕ ಮಿಡತೆ ಕಾಟ ಉಲ್ಬಣ: ರಾಜ್ಯದ ರೈತರಲ್ಲೂ ಆತಂಕ ಸುರು

ಮಾರಕ ಕೊರೊನಾ ಜಗತ್ತಿನಾದ್ಯಂತ ಜೀವ ಹಿಂಡುತಿದ್ದು ಅದರ ನಡುವೆ ಭಾರತದಲ್ಲಿ ಮರುಭೂಮಿ ಮಿಡತೆಯ ಕಾಟ ಶುರುವಾಗಿದೆ. ಕೊರನಾ ದಿಂದ ರೈತಾಪಿ ವರ್ಗದವರು ಹೆಚ್ಚು ಕಂಗೆಟ್ಟಿಲ್ಲವಾದರೂ ಆಕಸ್ಮಿಕವಾಗಿ ಬಂದ ಮಿಡತೆ ಹಾವಳಿಯಿಂದ ಅನ್ನದಾತರು ಹೆಚ್ಚು ಚಿಂತೆಪಡುವಂತಾಗಿದೆ.

. . . . . . . . .

ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೃಷಿ ಬೆಳೆಗಳಿಗೆ ಮಾರಕವಾಗಿರುವ ಈ ಮಿಡತೆಗಳ ಹಾವಳಿಗೆ ಉತ್ತರಭಾರತದ ಹಲವು ರಾಜ್ಯಗಳು ಈಗಾಗಲೇ ತತ್ತರಿಸಿದ್ದು ಮುಂದಿನ ದಿನಗಳಲ್ಲಿ ಮಿಡತೆಗಳು ದಕ್ಷಿಣ ಭಾರತದ ರಾಜ್ಯಗಳಿಗೆ ದಾಳಿ ಮಾಡುವ ಸಂಭವ ಹೆಚ್ಚಾಗಿದೆ.

. . . . . . .

ಮರುಭೂಮಿಯ ಗಡಿ ಪ್ರದೇಶವಾಗಿರುವ ರಾಜಸ್ಥಾನ ರಾಜ್ಯವನ್ನು ಮೊದಲು ಪ್ರವೇಶಿಸಿದ ಕೃಷಿ ಕಂಟಕ ಮಿಡತೆಗಳು ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಕೃಷಿಗೆ ಹಾನಿ ಮಾಡಿದೆ.

ಮಿಡತೆಗಳು ಹಿಂಡುಹಿಂಡಾಗಿ ಹೆಚ್ಚಿನ ಸಂಖ್ಯೆಗಳಲ್ಲಿ ಆಹಾರ ಬೆಳೆಗಳ ಗದ್ದೆಗಳಿಗೆ ಹಾನಿ ಮಾಡುತ್ತಿದ್ದು ರೈತರು ಸಂಪೂರ್ಣ ಹಾನಿಯ ಆತಂಕ ಎದುರಿಸುತ್ತಿದ್ದಾರೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳು ಮಿಡತೆ ಹಾವಳಿಯಿಂದ ರಕ್ಷಿಸಿಕೊಳ್ಳಲು ಸಿದ್ಧತೆ ನಡೆಸುತ್ತಿವೆಯಾದರು, ಇದರ ವ್ಯಾಪಕ ಹರಡುವಿಕೆಯನ್ನು ನೋಡಿದರೆ, ಇದನ್ನು ತಡೆಯುವುದು ಬಹುದೊಡ್ಡ ಸವಾಲು ಎನಿಸಿದೆ. ಅವು ಗುಂಪಾಗಿ ದಾಳಿ ನಡೆಸಿ ದಿನದಲ್ಲಿ ಕೆಲವು ಕಿ.ಮೀ ಬೆಳೆ ನಾಶ ಪಡಿಸುವ ಶಕ್ತಿ ಹೊಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading