Ad Widget

ನಾಪೊಕ್ಲು ಸರಣಿ ಕಳ್ಳತನ: ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ ಕಳ್ಳರು

ನಾಪೋಕ್ಲು: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬೀಗ ಒಡೆದು ಚಿನ್ನಾಭರಣಕಳವು ಮಾಡಿದ ಪ್ರಕರಣ  ಕಕ್ಕಬೇ ಸಮೀಪದ ಯುವಕ ಪಾಡಿ ಗ್ರಾಮದಲ್ಲಿ ನಡೆದಿದೆ.

ಯುವಕಪಾಡಿ ಗ್ರಾಮದ ಕರ್ ತಂಡ ಮಾಚವ್ವ(ಮೀನ) ಎಂಬವರು ತಮ್ಮ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು4 ದಿನದ ಸಂಬಂಧಿಕರ ಮನೆಗೆ ತೆರಳಿದ್ದರು
ನೆನ್ನೆಯ ದಿನ ಮನೆಗೆ ಹಿಂತಿರುಗಿದಾಗ ಮನೆಯ ಬಾಗಿಲಿನ ಬೀಗ ಮುರಿದು ಗೋಚರಿಸುತ್ತದೆ
ಮನೆಯೊಳಗಿನ ಗೋದ್ರೆಜ್ ಮುರಿದು 33 ಗ್ರಾಂ ಚಿನ್ನಾಭರಣ ಕಳವು ಆಗಿರುವುದು ಗಮನಕ್ಕೆ ಬಂದು ನಾಪೋಕ್ಲು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ
ಈ ಹಿನ್ನೆಲೆಯಲ್ಲಿ ಇಂದು ಬೆರಳಚ್ಚು ತಜ್ಞರು ಶ್ವಾನದಳ ದೊಂದಿಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ  ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

_ಈ ಸಂದರ್ಭ ಡಿವೈಎಸ್ ಪಿ ದಿನೇಶ್ ಕುಮಾರ್  ವೃತ  ನಿರೀಕ್ಷಕರಾದ ದಿವಾಕರ್ ಠಾಣಾಧಿಕಾರಿ R ಕಿರಣ್ ಮತ್ತು ಸಿಬ್ಬಂದಿಗಳು ಹಾಜರಿದ್ದರು_
ಇದಲ್ಲದೆ ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ 4 ದಿನದಲ್ಲಿ 4 ಕಳವು ಪ್ರಕರಣ ದಾಖಲಾಗಿದ್ದು ಪೊಲೀಸರು ಹಾಗೂ ಸ್ಥಳೀಯರು ಬೆಚ್ಚಿ ಬೀಳುವಂತಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!