ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮೇ 27 ರಿಂದ 29 ವರೆಗೆ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ (50-75% ಪ್ರದೇಶಗಳಲ್ಲಿ) ಹಾಗೂ ಮೇ 30 ರಿಂದ ಜೂನ್ 1 ರವರೆಗೆ ವ್ಯಾಪಕವಾಗಿ(75% ಗಿಂತ ಹೆಚ್ಚು ಪ್ರದೇಶಗಳಲ್ಲಿ), ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರೈತರು ಮುಂಗಾರಿನ ಪೂರ್ವದಲ್ಲಿ ಕೈಗೊಳ್ಳಬೇಕಾದ ಕೆಲಸಗಳನ್ನು ಮಳೆಯ ಆಧಾರದ ಮೇಲೆ ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕ ಐ.ಸಿ.ಎ.ಆರ್. – ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರು ಮಾಹಿತಿ ನೀಡಿದ್ದಾರೆ.
- Thursday
- November 21st, 2024