ಗುತ್ತಿಗಾರು. ಮೇ.೨೮: ತುಕ್ಕು ಹಿಡಿದ ವಿದ್ಯುತ್ ತಂತಿಗಳು, ಯಾವುದೇ ಸೂಕ್ತ ಭದ್ರತೆ ಇಲ್ಲದ ಟ್ರಾನ್ಸ್ಫಾರ್ಮರ್ ಒಂದು ಅಪಾಯವನ್ನು ಆಹ್ವಾನಿಸುತ್ತಿದೆ. ಅಂದಹಾಗೆ ಈ ದೃಶ್ಯ ಕಂಡುಬರುತ್ತಿರುವುದು ವಳಲಂಬೆಯ ಕೂವೆಕ್ಕೋಡಿಯ ಆರ್ನೋಜಿ ಬಳಿಯ ಟಿ.ಸಿಯಲ್ಲಿ.
ಸುಮಾರು ೨೦ ಮನೆಗಳಿಗೆ ಸಂಪರ್ಕ ಕಲ್ಪಿಸುವ ಆರ್ನೋಜಿಯ ಈ ಟ್ರಾನ್ಸ್ ಫಾರ್ಮರ್ ಕಳೆದ ಹಲವು ಸಮಯದಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಕಂಬದಲ್ಲಿ ಅಳವಡಿಸಲಾದ ಟಿ.ಸಿ ಸಂಪೂರ್ಣ ತೆರೆದ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೇ ಈ ಭಾಗದಲ್ಲಿ ಅಳವಡಿಸಲಾದ ವಿದ್ಯುತ್ ತಂತಿಗಳು ತುಂಬಾ ಹಳೆಯದಾಗಿದ್ದು ಬದಲಿಸುವ ಅವಶ್ಯಕತೆ ಹೆಚ್ಚಾಗಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆ ಇರುವುದಾಗಿ ಫಲಾನುಭವಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮೆಸ್ಕಾಂ ಈ ಕುರಿತು ಕ್ರಮವಹಿಸಿ ಮುಂಬರುವ ಅಪಾಯ ತಪ್ಪಿಸಬೇಕಿದೆ.
- Thursday
- November 21st, 2024