ರಬ್ಬರ್ ಶೀಟ್ ಮತ್ತು ಸ್ಕ್ರಾಪ್ ಕಳವು ಮಾಡಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರುಯಶಸ್ವಿಯಾಗಿದ್ದಾರೆ
ಮಡಿಕೇರಿ ತಾಲ್ಲೂಕು ಪಿ.ಪೆರಾಜೆ ಗ್ರಾಮದ ನಿವಾಸಿ ಆರ್.ಎ ಶರತ್ ಎಂಬುವವರು ಅವರ ರಬ್ಬರ್ ತೋಟದಿಂದ ಟ್ಯಾಪಿಂಗ್ ಮಾಡಿ ಸಂಗ್ರಹಿಸಿ ಇಟ್ಟಿದ್ದ 2,10,000 ರೂ ಬೆಲೆಬಾಳುವ 1300 ಕೆ.ಜಿ ರಬ್ಬರ್ ಶೀಟ್ ಮತ್ತು 900 ಕೆಜಿಯಷ್ಟು ರಬ್ಬರ್ ಸ್ಕ್ರ್ಯಾಪ್ ನ್ನು ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರು ಮೇ ೨೧ ರಂದು ರಾತ್ರಿ ಕಳವು ಮಾಡಿ ಒಂದು ಪಿಕ್ ಅಪ್ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದು ಈ ಬಗ್ಗೆ ಮೇ ೨೪ ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ತನಿಖೆ ಕೈಗೊಂಡು ಮೇ ೨೪ ರಂದು ಆರೋಪಿಗಳಾದ ಕೇರಳ ರಾಜ್ಯದ ಕೊಟ್ಟಪಾಡ ಗ್ರಾಮದ ಚೋಲಾಯಿಲ್ ಹೌಸ್ ನಿವಾಸಿ ಸಿ. ರಜನೀಶ್, ತೊಟ್ಟತ್ತೀಲ್ ಹೌಸ್ ನಿವಾಸಿ ಟಿ.ಕೆ ಅರುಣ್ ಕುಮಾರ್ ಮತ್ತು ಲಾಲಂ ಗ್ರಾಮದ ನಿವಾಸಿ ಸಿರಿಯಾಕ್ ಕುರಿಯನ್ ಎಂಬುವವರನ್ನು ದಸ್ತಗಿರಿ ಮಾಡಿ ಕಳವು ಮಾಡಿ ಸಾಗಾಟ ಮಾಡುತ್ತಿದ್ದ ರಬ್ಬರ್ ಶೀಟ್ ಮತ್ತು ಸ್ಕ್ರ್ಯಾಪ್ ನ್ನು ಕೃತ್ಯಕ್ಕೆ ಬಳಸಿದ ಕೆಎ-21-ಎ-9114 ರ ಪಿಕ್ ಅಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
- Friday
- November 1st, 2024