ಅರಬ್ ರಾಷ್ಟ್ರವಾದ ಬಹರೈನ್ ನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಕೇರ್ ಅಂಡ್ ಶೇರ್ ಚಾರಿಟೇಬಲ್ ಟ್ರಸ್ಟ್ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದಿದೆ.
ಕೋವಿಡ್ 19 ನಿಂದ ನಮ್ಮ ದೇಶ ಮಾತ್ರವಲ್ಲ ವಿದೇಶಗಳು ಕೂಡ ಕಷ್ಟಕ್ಕೀಡಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದರಲ್ಲೂ ವಿದೇಶದಲ್ಲಿ ಕಷ್ಟಕ್ಕೀಡಾಗಿರುವ ಭಾರತೀಯರಲ್ಲಿ ಹಲವರ ಪರಿಸ್ಥಿತಿ ಕೇಳಿದರೆ ಕಣ್ಣೀರು ಬರುವ ರೀತಿಯಲ್ಲಿತ್ತು. ಜೀವನೋಪಾಯಕ್ಕೆ ಮಾರ್ಗವಿಲ್ಲದೆ ಪರದಾಡುವಂತಹ ಶೋಚನೀಯ ಸ್ಥಿತಿ ಈ ಭಾಗದಲ್ಲಿ ಕಂಡುಬರುತ್ತಿತ್ತು. ಅವರಲ್ಲಿ ತುಂಬಾ ಜನ ಯಾರಲ್ಲೂ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿಯಲ್ಲಿ ಯಾವುದೇ ಜಾತಿ ಭೇದ ನೋಡದೆ ಎಲ್ಲರಿಗೂ ಸಮಾನ ರೀತಿಯಲ್ಲಿ ಸಹಾಯ ಮಾಡುತ್ತಾ ಹಸಿದಿದ್ದವರಿಗೆ ಆಹಾರ ತಲುಪಿಸಲು, ರಮಳಾನ್ ನಲ್ಲಿ ಕಿಟ್ ವಿತರಿಸಲು ನಮ್ಮ ಟ್ರಸ್ಟ್ ನಿಂದ ಸಾಧ್ಯವಾಗಿದೆ. ಇತ್ತೀಚೆಗೆ ಒಬ್ಬ ಕ್ಯಾನ್ಸರ್ ರೋಗಿಗೂ ಸಹಾಯ ಮಾಡುವಲ್ಲಿ ಕೂಡ ನಮ್ಮ ಚಾರಿಟೇಬಲ್ ಟ್ರಸ್ಟ್
ಉತ್ತಮ ಕಾರ್ಯದಲ್ಲಿ ನಿರತವಾಗಿದೆ ಎಂದು ಟ್ರಸ್ಟಿನ ಸ್ಥಾಪಕ
ಮಜೀದ್ ಝುಹ್ರಿ ಎಲಿಮಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.