Ad Widget

ಜಯನಗರ : ಸ್ಮಶಾನ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡ ರೋಟರಿ ಕ್ಲಬ್ ಸುಳ್ಯ- ಸುಸಜ್ಜಿತ ಸ್ಮಶಾನ ರಚಿಸಿ ನಗರಾಡಳಿತಕ್ಕೆ ಹಸ್ತಾಂತರ : ಪ್ರಭಾಕರ ನಾಯರ್

ಶೋಚನೀಯ ಸ್ಥಿತಿಯಲ್ಲಿರುವ ಜಯನಗರದ ಸ್ಮಶಾನವನ್ನು ರೋಟರಿ ಕ್ಲಬ್ ವತಿಯಿಂದ ಅಭಿವೃದ್ಧಿ ಮಾಡಲು ನಿರ್ಧರಿಸಿದ್ದೇವೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಸಾಗುತ್ತಿದ್ದು ರುದ್ರಭೂಮಿ ಛಾವಣಿ ಕೆಲಸ, ಸಿಲಿಕಾನ್ ಛೇಂಬರ್ ಅಳವಡಿಕೆ, ಶೌಚಾಲಯ, ಸ್ನಾನಗೃಹ, ಶಿವನ ಮೂರ್ತಿ ಹಾಗೂ ಪಾರ್ಕ್ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಿ ಕಾರ್ಯ ಆರಂಭಿಸಲಾಗಿದೆ ಎಂದು ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ಪ್ರಭಾಕರ ನಾಯರ್ ಅವರು ಹೇಳಿದರು.

. . . . .

ಡಿ.27 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಒಂದು ಮಹತ್ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಮಶಾನ ನಿರ್ವಹಣೆ ಸಮಿತಿ ಅಧ್ಯಕ್ಷ ಕಸ್ತೂರಿ ಶಂಕರ್, ಪ್ರಮುಖರಾದ ರಾಮಚಂದ್ರ.ಪಿ ಆನಂದ ಖಂಡಿಗೆ, ಪುರುಷೋತ್ತಮ ಕೆ.ಜಿ, ಬಿ.ಟಿ.ಮಾಧವ, ಪ್ರಸನ್ನ ಕಲ್ಲಾಜೆ, ಮಹಾಲಕ್ಷ್ಮಿ ಕೊರಂಬಡ್ಕ, ಹಾಗೂ ನ.ಪಂ. ಸದಸ್ಯೆ ಶಿಲ್ಪಾ ಸುದೇವ್ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!