ಸುಳ್ಯ: ಬಡತನ ಕೆವಿಜಿ ಅವರನ್ನು ಬಲಿಷ್ಠವನ್ನಾಗಿ ಮಾಡಿತು ಹಾಗಾಗಿ ಸುಳ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಯಿತು. ಎಲ್ಲರೂ ಕೆವಿಜಿ ಅವರಂತೆ ಪರೋಪಕಾರ ಮಾಡುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ರಾಜಿವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಪುತ್ತೂರಾಯ ಅವರು ಹೇಳಿದರು.
ಡಿ.೨೬ ರಂದು ಕೆವಿಜಿ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕೆವಿಜಿ ಸುಳ್ಯ ಹಬ್ಬದ ಉದ್ಘಾಟನೆ ಮಾಡಿ ಮಾತನಾಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕಮಲಾಕ್ಷಿ ವಿ ಶೆಟ್ಟಿ ಹಾಗೂ ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಅವರಿಗೆ ಕೆವಿಜಿ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪದ್ಮಶ್ರೀ ಪುರಸ್ಕೃತ ಹರೆಕಳ ಹಾಜಬ್ಬ ಅವರು ಸಾಧಕರನ್ನು ಫಲ-ಪುಷ್ಪ- ಫಲಕ ನೀಡಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ವಹಿಸಿದ್ದರು.
ಈ ಸಂದರ್ಭ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್. ಕೆ.ವಿ, ನ.ಪಂ.ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸುಳ್ಯಹಬ್ಬದ ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ ರೈ, ಕೋಶಾಧಿಕಾರಿ ದಿನೇಶ್ ಮಡ್ತಿಲ, ಹರಪ್ರಸಾದ್ ತುದಿಯಡ್ಕ, ದಿನೇಶ್ ಮಡ್ತಿಲ, ಚಂದ್ರಶೇಖರ ಪೇರಾಲು, ಪ್ರಮುಖರಾದ ಅಕ್ಷಯ್ ಕೆ.ಸಿ, ಎನ್.ಎ ಜ್ಞಾನೇಶ್, ಡಾ.ಕೆ.ಟಿ ವಿಶ್ವನಾಥ್, ಡಾ.ಲೀಲಾಧರ ಕೆ.ವಿ, ಹೇಮನಾಥ ಕುರುಂಜಿ, ಪ್ರೋ. ಬಾಲಚಂದ್ರ ಗೌಡ , ಕೆ.ಆರ್.ಗಂಗಾಧರ, ಚಂದ್ರಾ ಕೋಲ್ಚಾರ್, ನಿತ್ಯಾನಂದ ಮುಂಡೋಡಿ, ಎನ್.ಜಯಪ್ರಕಾಶ್ ರೈ, ಮೀನಾಕ್ಷಿ ಗೌಡ ಮೊದಲಾದವರು ಉಪಸ್ಥಿತರಿದ್ದರು. ಸುಳ್ಯಹಬ್ಬದ ಅಧ್ಯಕ್ಷ ಪಿ.ಸಿ ಜಯರಾಮ ಸ್ವಾಗತಿಸಿ, ಚಂದ್ರಾಕ್ಷಿ ಜೆ.ರೈ ವಂದಿಸಿದರು. ಕು| ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.