ಪ್ರಧಾನಮಂತ್ರಿಗೆ ಬರೆದ ಪತ್ರಕ್ಕೆ ಎಚ್ಚರಗೊಂಡ ಅಧಿಕಾರಿಗಳು ಕೊಲ್ಲಮೊಗ್ರ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಜನರ ಸಮಸ್ಯೆ ಕೇಳೋರೆ ಇಲ್ಲದಂತಾಗಿದೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಇರುವ ಒಂದೇ ಆಗಿರುವುದರಿಂದ ಜನ ತುರ್ತು ಸೇವೆಗಳಿಗೆ ಪರದಾಡುವಂತ ಪರಿಸ್ಥಿತಿ ಬಂದಿದೆ. ಶಾಸಕರು ಸಂಸದರೂ ಬಿಎಸ್ಎನ್ ಎಲ್ ನೆಟ್ವರ್ಕ್ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಂತಿಲ್ಲ. ಮತ್ತೆ ಸ್ಥಳೀಯ ಜನಪ್ರತಿನಿಧಿಗಳು ಏನೂ ಮಾಡಲು ಸಾಧ್ಯ . ಕೋಲು ಮುರಿಯಬಾರದು ಹಾವು ಸಾಯಬಾರದು ಎಂಬ ಗಾದೆಯಂತೆ ಸರಕಾರ ಬಿಎಸ್ಎನ್ ಎಲ್ ಬಗ್ಗೆ ನಿಲುವು ತಳೆದಿದೆ. ಆದರೇ ಸರಕಾರಗಳು ಇಂತಹ ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ದೂರವಾಣಿ ಸಂಪರ್ಕ ಒದಗಿಸುವುದು ಸರಕಾರದ ಜವಾದ್ಬಾರಿಯೂ ಹೌದು. ಆದರೇ ಇಂದು ಲಾಭದ ದೃಷ್ಟಿಯನ್ನಿಟ್ಟುಕೊಂಡ ಸರಕಾರಗಳು ಕಷ್ಟದಲ್ಲಿದ್ದ ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಮುಚ್ಚುವ ಹಂತಕ್ಕೆ ತಲುಪಿಸಿದೆ. ನಗರಪ್ರದೇಶಗಳಲ್ಲಿ ಆದರೆ ಇತರ ಖಾಸಗಿ ನೆಟ್ವರ್ಕ್ ಗಳಿವೆ ಅವುಗಳನ್ನು ಜನ ಬಳಸಲು ಅವಕಾಶವಿದೆ. ಸರಕಾರ ಬಿ ಎಸ್ ಎನ್ ಎಲ್ ಅನ್ನು ಅಭಿವೃದ್ಧಿ ಪಡಿಸದೇ ಇದ್ದರೆ ಇತರ ಇತರ ಖಾಸಗಿ ನೆಟ್ವರ್ಕ್ ಗಳಿಗಾದರೂ ನಿರ್ಮಾಣಕ್ಕೆ ವಿಶೇಷ ಅವಕಾಶ ಮಾಡಿಕೊಡಬೇಕು. ಆಗ ಮಾತ್ರ ಗ್ರಾಮೀಣ ನೆಟ್ವರ್ಕ್ ಸಮಸ್ಯೆ ಸರಿಯಾದಿತು ಎನಿಸುತ್ತದೆ.
ಬಿಎಸ್ ಎನ್ ಎಲ್ ವ್ಯವಸ್ಥೆ ಬಗ್ಗೆ ಬೇಸತ್ತು ಯುವ ಮುಂದಾಳು ಉದಯ ಶಿವಾಲ ಪ್ರಧಾನಮಂತಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿ ಪ್ರಧಾನಿಗಳ ಕಚೇರಿಯಿಂದ ಪತ್ರ ಬಂದಿತ್ತು. ಜನವರಿ ವೇಳೆಗೆ ೩ಜಿ ನೆಟ್ವರ್ಕ್ ಅಳವಡಿಸುವ ಭರವಸೆ ಬಂದಿತ್ತು. ಆದರೇ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಬಲಿಯಾಗಿತ್ತು. ಈ ಬಗ್ಗೆ ಅಧಿಕಾರಿಗಳ ಬೆನ್ನು ಬಿಡದೇ ಪ್ರಯತ್ನಿಸಿದ ಪರಿಣಾಮವಾಗಿ ಜೂನ್ ಮೊದಲ ವಾರದಲ್ಲಿ ೩ಜಿ ಅಳವಡಿಸಿಕೊಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಉದಯ ಶಿವಾಲ ತಿಳಿಸಿದ್ದಾರೆ.
ಈ ಬಗ್ಗೆ ಉದಯ ಶಿವಾಲ ಮಾತನಾಡಿ “ಕಳೆದ ಒಂದು ವಾರಗಳಿಂದ ಕೊಲ್ಲಮೊಗ್ರ ಬಿಎಸ್ ಎನ್ ಎಲ್ ಟವರ್ ನೆಟ್ವರ್ಕ್ ಇಲ್ಲದೆ ತುಂಬಾ ಸಮಸ್ಯೆಯಾಗಿದೆ.ಕರೆಂಟ್ ಇದ್ದರೆ ಮಾತ್ರ ನೆಟ್ವರ್ಕ್ ಇರುವ ನಮ್ಮ ಗ್ರಾಮದಲ್ಲಿ ಒಂದೇ ಟವರ್ ನ ಆಶ್ರಯಸಿಕೊಂಡು ಬದುಕುವ ನಮ್ಮದ್ದಾಗಿದೆ. ಆದರೆ ಕೆಲವು ದಿನಗಳಿಂದ ಯಾವುದೇ ತುರ್ತು ಸಂದರ್ಭಗಳಲ್ಲಿ ನೆಟ್ವರ್ಕ್ ಬಳಸಲು ಮೂರು ನಾಲ್ಕು ಕಿ.ಮೀ ಸಂಚರಿಸುವ ಪರಿಸ್ಥಿತಿ ನಮ್ಮದಾಗಿದೆ. ಯಾವುದೇ ಅಧಿಕಾರಿಗೆ ಕರೆಮಾಡಿದರೆ ಸ್ವೀಕರಿಸುವುದಿಲ್ಲ.ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲˌ. ಏರಡು ದಿನಗಳ ಹಿಂದೆ ಮಂಗಳೂರಿನ ನಿಗಮದ ಜಿ ಎಂ. ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಜೂನ್ 5 ರ ಮೊದಲು ಏಲ್ಲಾ ಸಮಸ್ಯೆಯನ್ನು ನಿವಾರಿಸುತ್ತೇನೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಇಂತಹ ಭರವಸೆಯನ್ನು ಅನೇಕ ಬಾರಿ ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ.ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ಕ್ಲಾಸ್ ಮತ್ತು ವರ್ಕ ಪ್ರಮ್ ಹೋಮ್ ಇರುವ ಕಾರಣ ಜನಗಳಿಗೆ ಮತ್ತಷ್ಟು ಸಮಸ್ಯೆ ಎದುರಾಗಿದ್ದು ದೂರದ ಊರಿನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಆನೈಲ್ ಕ್ಲಾಸ್ ಹಾಗೂ ವರ್ಕ್ ಪ್ರಮ್ ಹೋಮ್ ಮಾಡುವ ಸ್ಥಿತಿ ಕೊಲ್ಲಮೊಗ್ರ ಜನರ ಪರಿಸ್ಥಿತಿಯಾಗಿದೆ. ಲಾಕ್ ಡೌನ್ ಸಮಯದಲ್ಲಿ ನೆಟ್ವರ್ಕ್ ಸಮಸ್ಯೆಯಲ್ಲಿ ಪಡಿತರ ಪಡೆಯಲು ಕೂಡ ತುಂಬಾ ಕಷ್ಟವಾಗಿತ್ತು. ಇದುವರೆಗೆ ಇಲಾಖೆ ನೀಡಿದ್ದ ಟೊಳ್ಳು ಭರವಸೆಯನ್ನು ಕೇಳಿ ಜನರು ಸುಸ್ತಾಗಿದ್ದಾರೆ. ಸಮಸ್ಯೆಗೆ ಸ್ಪಂದಿಸುವಂತೆ ಶಾಸಕರು ಮತ್ತು ಸಚಿವರನ್ನು ಸಂಪರ್ಕಿಸಿದಾಗ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ. ಸಮಸ್ಯೆ ಪರಿಹರಿಸದ್ದಿದಲ್ಲಿ ಜೂನ್ 5 ರ ನಂತರ ಊರಿನ ಮುಖಂಡರು ಹಿರಿಯಯರ ಸಲಹೆ ಪಡೆದು ಮುಂದಿನ ಹೋರಾಟದ ಬಗ್ಗೆ ತಿರ್ಮಾನಿಸಲಾಗುವುದು ಎಂದರು.