ಐವರ್ನಾಡು, ಪಾಂಬಾರು, ಅಮಲ, ರಸ್ತೆಯ ದುರಸ್ತಿಯಾಗಿರದೇ ಇರುವುದನ್ನು ವಿರೋಧಿಸಿ ಜ.3 ರಂದು ಐವರ್ನಾಡು ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೋರಾಟದ ಕುರಿತು ಡಿ. 25 ರಂದು ಪಾಲೆಪ್ಪಾಡಿ ಮಂಜುಶ್ರೀ ಕ್ರೀಡಾಂಗಣದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು.
ಹೋರಾಟ ಸಮಿತಿಯ ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಹಾಗೂ ಉಪಾಧ್ಯಕ್ಷರನ್ನಾಗಿ ಅಶೋಕ್ ಎಡಮಲೆ ಅವರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಮಹಾಬಲ ಬಿರ್ಮುಕಜೆ, ಜಯಪ್ರಕಾಶ್ ನೆಕ್ರಪ್ಪಾಡಿ, ಯೋಗಿಶ್ ಕಲ್ಲಗದ್ದೆ, ಜಯಪ್ರಸಾದ್ ಕಜೆತ್ತಡ್ಕ, ರಾಜೀವಿ ಉದ್ದಂಪ್ಪಾಡಿ, ಮಮತಾ ಉದ್ದಂಪ್ಪಾಡಿ ಹಾಗೂ ಊರ – ಪರವೂರ ನಾಗರಿಕರು ಉಪಸ್ಥಿತರಿದ್ದರು.