
ಸುಳ್ಯ ತಾಲೂಕು ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ ನ್ಯಾಯವಾದಿ ಸುಕುಮಾರ ಕೋಡ್ತುಗುಳಿಯವರನ್ನು ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ನೇಮಕಗೊಳಿಸಿದ್ದಾರೆ. ಇವರು 1990 ರಿಂದ 99 ರವರೆಗೆ ಯುವ ಜನತಾದಳದ ಅಧ್ಯಕ್ಷರಾಗಿ ದುಡಿದಿದ್ದಾರೆ. ಯುವ ಜನತಾದಳದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವಿಜಯ ರವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಯುವ ಜನತಾದಳದ ಅಧ್ಯಕ್ಷರಾಗಿದ್ದ ಸುಕುಮಾರ್ ಅವರು ತಾಲೂಕಿನಾದ್ಯಂತ ಯುವ ಜನತಾದಳದ ಕಾರ್ಯಕಾರಿ ಸಮಿತಿ ರಚಿಸಿ ಯುವ ಕಾರ್ಯಕರ್ತರಿಗೆ ನಾಯಕತ್ವ ತರಬೇತಿ ಶಿಬಿರ ಆಯೋಜಿಸಿದ್ದರು.
ಇವರು ನ್ಯಾಯವಾದಿಯಾಗಿ ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.