ಚಂದ್ರಶೇಖರ ಪೇರಾಲು ಅವರು ಸುಳ್ಯದ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾಗಿದೆ. ಎಲ್ಲಾಶಿಕ್ಷಕರಿಗೂ ಇವರು ಮಾದರಿಯಾಗಿದ್ದಾರೆ. ಇವರ ನಿವೃತ್ತ ಜೀವನ ಉತ್ತಮವಾಗಿರಲಿ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಅವರು ಅಭಿಪ್ರಾಯಪಟ್ಟರು.
ಡಿ.18 ರಂದು ಸುಳ್ಯದ ಗಿರಿದರ್ಶಿನಿ ಸಭಾಭವನದಲದಲ್ಲಿ ಚಂದ್ರಶೇಖರ ಪೇರಾಲು ಅಭಿನಂಧನಾ ಕಾರ್ಯಕ್ರಮದಲ್ಲಿ ಪೇರಾಲು ದಂಪತಿಗಳನ್ನು ಸಮ್ಮಾನಿಸಿ ಅವರು ಮಾತನಾಡಿದರು.
ಪೇರಾಲು ಅವರ ಅಭಿನಂದನಾ ಭಾಷಣವನ್ನು ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಅವರು ಮಾಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಎನ್.ಭವಾನಿಶಂಕರ್ ಅಧ್ಯಕ್ಷತೆ
ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ, ಸುಂದರ ಗೌಡ ಕೇಪು, ಉಷಾ ಪೇರಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಲಕ್ಷ್ಮೀಶ ರೈ ಸ್ವಾಗತಿಸಿದರು. ಚಂದ್ರಮತಿ ಸನ್ಮಾನ ಪತ್ರ ವಾಚಿಸಿದರು. ಮಮತಾ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು,ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು,ಅಭಿಮಾನಿಗಳು ಚಂದ್ರಶೇಖರ ಪೇರಾಲು-ಉಷಾ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.