ಕೆವಿಜಿ ಸುಳ್ಯ ಹಬ್ಬದ ದಶಮಾನೋತ್ಸವ ಸಂಭ್ರಮವು ಇದೇ ಡಿ.25 ಹಾಗೂ ಡಿ. 26 ರಂದು ಕೆವಿಜಿ ಕಾನೊನು ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಸುಳ್ಯ ಹಬ್ಬ ಸೇವಾ ಸಂಘ ಸುಳ್ಯ ಸಂಘದ ಅಧ್ಯಕ್ಷ ಪಿ.ಸಿ ಜಯರಾಮ ಅವರು ಹೇಳಿದರು.
ಡಿ.17 ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಡಿ.25ರಂದು ಪೂ. 9.30 ರಂದು ಮಕ್ಕಳಿಗೆ, ಮಹಿಳೆ ಹಾಗೂ ಪುರುಷರಿಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಕಾನೊನು ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗುವುದು. ಇದರ ಉದ್ಘಾಟನೆಯನ್ನು ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೋಕೇಸರ ಡಾ.ಹರಪ್ರಸಾದ್ ತುದಿಯಡ್ಕ ನೆರವೇರಿಸಲಿದ್ದಾರೆ .
ಡಿ. ೨೫ ರಂದು ಪೂ.10ರಿಂದ ಕೆ.ವಿ.ಜಿ ಅವರ ಕುರಿತು ವಿಚಾರ ಸಂಕಿರಣ ನಡೆಯಲಿದ್ದು ಖ್ಯಾತ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ . ನರೇಂದ್ರ ರೈ ದೇರ್ಲ ‘ ಹಾಗೂ ಸುಳ್ಯ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಯಶೋದಾ ರಾಮಚಂದ್ರ ಅವರು ವಿಚಾರ ಮಂಡನೆ ಮಾಡಲಿದ್ದಾರೆ ಎಂದರು.
ಡಿ.26ರಂದು ಪೂ. 9.30 ಕ್ಕೆ ಕೆವಿಜಿ ಸುಳ್ಯ ಹಬ್ಬದ ಕಛೇರಿಯಲ್ಲಿ
ಕುರುಂಜಿಯವರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದ ನಂತರ 10 ಗಂಟೆಗೆ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಡಾ.ಕೆವಿಜಿಯವರ ಪ್ರತಿಮೆಗೆ ಹಾರಾರ್ಪಣೆ ಮಾಡಲಾಗುವುದು. ಪೂ. 10.30 ಕ್ಕೆ ಜಯರಾಮ ನಾಯರ್ ಅವರಿಗೆ ಮನೆಯ ಹಸ್ತಾಂತರ ಕಾರ್ಯಕ್ರಮ ಕಲ್ಲುಮುಟ್ಲುವಿನಲ್ಲಿ ನಡೆಯಲಿದೆ. ಇದರ ಹಸ್ತಾಂತರವನ್ನು ಸುಳ್ಳ ಹಬ್ಬ ಸಮಿತಿಯ ಗೌರವಾಧ್ಯಕ್ಷ ಡಾ .ಕೆ.ವಿ.ಚಿದಾನಂದ ಅವರು ನೆರವೇರಿಸುವರು. ಕರ್ನಾಟಕ ರಾಜ್ಯ ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ರಾಮಚಂದ್ರನ್ ಪಲೇರಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ,ಸ್ಥಳೀಯ ನ.ಪಂ.ಸದಸ್ಯೆ ಸುಶೀಲಾ ಜಿನ್ನಪ್ಪ ಉಪಸ್ಥಿತರಿರುತ್ತಾರೆ ಎಂದರು.
ಡಿ.26 ರಂದು ಸಂಜೆ 6.30 ಕ್ಕೆ ಕೆವಿಜಿ ಕಾನೂನು ಕಾಲೇಜು ಆವರಣದಲ್ಲಿ ಕೆವಿಜಿ ಸಂಸ್ಮರಣೆ,ಕೆವಿಜಿ ಸಾಧನಾಶ್ರೀ ಮತ್ತು ಯುವಸಾಧಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. 6.30ರಿಂದ ಸಾಕ್ಸಫೋನ್ ವಾದನದ ಬಳಿಕ ಸಭಾ ಕಾರ್ಯಕ್ರಮ ಡಾ.ಕೆ.ವಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕರಾದ ಡಾ.ಕೆ.ಪಿ.ಪುತ್ತೂರಾಯ ಕೆವಿಜಿ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಹಿರಿಯ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಹಾಗು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಕಮಲಾಕ್ಷಿ ವಿ ಶೆಟ್ಟಿ ಅವರಿಗೆ 2021 ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಸನ್ಮಾನ ನೆರವೇರಿಸುವರು. ಅಲ್ಲದೆ ಯುವ ಸಾಧಕರಾದ ಡಾ.ಅಕ್ಷಯ್ ಕುದ್ಪಾಜೆ, ರಾಧಾಕೃಷ್ಣ ಇಟ್ಟಿಗುಂಡಿ, ಉಮೇಶ್ ಮಣಿಕ್ಕಾರ ಸಾಕ್ಸೋಫೋನ್ ಜಂಟಿವಾದಕರಾದ ಸುಬ್ರಹ್ಮಣ್ಯದ ದಿಲೀಶ್ ಮತ್ತು ಲಿಖಿತಾ ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೆ.ವಿ.ಜಿ.ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ ರೈ, ಕೋಶಾಧಿಕಾರಿ ದಿನೇಶ್ ಮಡ್ತಿಲ, ಪದಾಧಿಕಾರಿಗಳಾದ ಎಸ್.ಸಂಶುದ್ದೀನ್, ಚಂದ್ರಶೇಖರ ಪೇರಾಲು, ಪಿ.ಎಸ್.ಗಂಗಾಧರ, ಸದಾನಂದ ಮಾವಜಿ, ಸುರೇಶ್ ಎಂ.ಎಚ್ ಉಪಸ್ಥಿತರಿದ್ದರು.