ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಖರೀದಿಸುವ ಆಂಬುಲೆನ್ಸ್ ಖರೀದಿ ಯೋಜನೆಗೆ ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಶ್ರೀ ಶಂಖಪಾಲ ಸುಬ್ರಮಣ್ಯ ದೇವಸ್ಥಾನ ವಳಲಂಬೆ ಇದರ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ ಹಾಗೂ ಹೆಚ್. ವಿಮಲಾ ಹೊಸೊಳಿಕೆ ಮತ್ತು ಮನೆಯವರು ಸಹಾಯಧನ ನೀಡಿ ಮಹತ್ವದ ಈ ಯೋಜನೆಯ ಯಶಸ್ಸಿಗೆ ಶುಭಾಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಾದೇಶಿಕ ಕೃಷಿ ಯೋಜನಾ ಅಧಿಕಾರಿ ಲವ ಕುಮಾರ್ ಹೊಸೊಳಿಕೆ, ಗುತ್ತಿಗಾರು ಕಿರಣ ಸಂಸ್ಥೆ ಅಧ್ಯಕ್ಷ ಯೋಗೀಶ್ ಹೊಸೊಳಿಕೆ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯರಾದ ಸುಕುಮಾರ್ ಕೋಡೊಂಬು ಉಪಸ್ಥಿತರಿದ್ದರು.
- Thursday
- January 30th, 2025