Ad Widget

ಅಡ್ಕಾರು ಕುಟುಂಬದ ಧರ್ಮನಡಾವಳಿ ನೇಮೋತ್ಸವ

ಅಡ್ಕಾರು ಕುಟುಂಬದ ಶ್ರೀ ವಿಷ್ಣುಮೂರ್ತಿ, ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ಮುನಿಸ್ವಾಮಿ ಮತ್ತು ಪರಿವಾರ ದೈವಗಳ ಧರ್ಮನಡಾವಳಿ ನೇಮೋತ್ಸವವು ಅಡ್ಕಾರು ತರವಾಡು ಮನೆಯಲ್ಲಿ ಡಿ.11 ಮತ್ತು 12 ರಂದು 2 ದಿನಗಳ ಕಾಲ ನಡೆಯಿತು.

. . . . .


ಡಿ.11 ರಂದು ಸಂಜೆ 6:30 ಕ್ಕೆ ದೈವಗಳ ಭಂಡಾರ ತೆಗೆದು ನಂತರ ರಾತ್ರಿ 7:00 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಪ್ರಾರಂಭ(ತೊಡಂಙಲ್) ಹಾಗೂ ಕುಳ್ಚಾಟ ನಡೆಯಿತು.
ನಂತರ ರಾತ್ರಿ 8:00 ಗಂಟೆಯಿಂದ ಶ್ರೀ ಗುರುಕಾರ್ನೂರು ನೇಮೋತ್ಸವ ನಡೆಯಿತು. ನಂತರ ಅನ್ನ ಪ್ರಸಾದ ವಿತರಣೆಯ ನಂತರ ರಾತ್ರಿ 10:00 ಗಂಟೆಯಿಂದ ಜಾವತೆ, ಪಾಷಾಣಮೂರ್ತಿ, ಅಜ್ಜಿ ಪಾಷಾಣಮೂರ್ತಿ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ನೇಮೋತ್ಸವ ನಡೆಯಿತು.
ನಂತರ ಮರುದಿವಸ ಡಿ.12 ರಂದು ಬೆಳಿಗ್ಗೆ 8:00 ಗಂಟೆಯಿಂದ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳ ನೇಮೋತ್ಸವ ಹಾಗೂ ಧರ್ಮನಡಾವಳಿ ನಡೆಯಿತು.
ನಂತರ ಮದ್ಯಾಹ್ನ ಅನ್ನ ಪ್ರಸಾದ ವಿತರಣೆಯ ನಂತರ ಅಪರಾಹ್ನ 1:30 ರಿಂದ ಮಂತ್ರವಾದಿ ಗುಳಿಗ, ರಾಹು ಗುಳಿಗ ಹಾಗೂ ಬಂಟ ಗುಳಿಗ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಅಡ್ಕಾರು ಕುಟುಂಬದ ಕುಟುಂಬಸ್ಥರು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!