Ad Widget

ಸುಳ್ಯದ 8 ಮಂದಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಡಿ.11 ಮತ್ತು 12ರಂದು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ರಿ.) ಇದರ ವತಿಯಿಂದ 40ನೇ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕನ್ನು 8 ಜನ ಕ್ರೀಡಾಪಟುಗಳು ಪ್ರತಿನಿಧಿಸಿದ್ದು ಎಲ್ಲಾ 8 ಮಂದಿ ಕ್ರೀಡಾಪಟುಗಳು ಪದಕಗಳನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತುಕಾರಾಮ ಏನೆಕಲ್ಲು 100ಮೀ. ಮತ್ತು 200ಮೀ. ಓಟದಲ್ಲಿ ಚಿನ್ನದ ಪದಕ, ಚಂದ್ರಶೇಖರ ಕುಕ್ಕುಪುಣಿ 100ಮೀ., 200ಮೀ. ಮತ್ತು 400ಮೀ. ಓಟದಲ್ಲಿ ಚಿನ್ನದ ಪದಕ, ಎಂ.ಎಂ. ರಾಮಯ್ಯ 400ಮೀ., 1500ಮೀ. ಓಟದಲ್ಲಿ ಚಿನ್ನದ ಪದಕ ಹಾಗೂ 800ಮೀ. ಓಟದಲ್ಲಿ ಬೆಳ್ಳಿಯ ಪದಕ, ಚಂದ್ರಶೇಖರ್ ಬಿಳಿನೆಲೆ 1500ಮೀ., 5000ಮೀ., 10000ಮೀ. ಓಟದಲ್ಲಿ ಚಿನ್ನದ ಪದಕ, ಮೇದಪ್ಪ ಬಿಳಿನೆಲೆ 400ಮೀ., 800ಮೀ., 1500ಮೀ. ಓಟದಲ್ಲಿ ಬೆಳ್ಳಿಯ ಪದಕ, ಸುಳ್ಯದ ಕೃಷ್ಣಪ್ಪ ನಾಯ್ಕ ಶಾಂತಿನಗರ 100ಮೀ., 200ಮೀ. ಓಟದಲ್ಲಿ ಬೆಳ್ಳಿಯ ಪದಕ ಹಾಗೂ ಉದ್ದಜಿಗಿತದಲ್ಲಿ ಚಿನ್ನದ ಪದಕ, ಲಕ್ಷ್ಮಣ ಬೊಳ್ಳಾಜೆ 100ಮೀ. ಓಟದಲ್ಲಿ ಕಂಚಿನ ಪದಕ, ಉದ್ದಜಿಗಿತದಲ್ಲಿ ಚಿನ್ನದ ಪದಕ ಹಾಗೂ 400ಮೀ. ಓಟದಲ್ಲಿ ಬೆಳ್ಳಿಯ ಪದಕ, ಪ್ರವೀಣ್ ಐವರ್ನಾಡು ಗುಂಡೆಸೆತ, ಈಟಿ ಎಸೆತ ಹಾಗೂ ಚಕ್ರ ಎಸೆತಗಳಲ್ಲಿ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದು ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading