ಮಿತ್ರ ಯುವಕ ಮಂಡಲ (ರಿ) ಕೊಯಿಕುಳಿ ಹಾಗೂ ಕುರಲ್ ತುಳು ಕೂಟ ದುಗ್ಗಲಡ್ಕದ ಸಂಚಾಲಕರಾದ ಶ್ರೀ ಕೆ ಟಿ ವಿಶ್ವನಾಥ್ ರವರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ವೇದಿಕ್ ಕಲ್ವರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿ ದೊರೆತ ಹಿನ್ನೆಲೆಯಲ್ಲಿ ಮಿತ್ರ ಯುವಕ ಮಂಡಲದ ಸಾಮಾನ್ಯ ಸಭೆಯಲ್ಲಿ ಅಭಿನಂದಿಸಲಾಯಿತು. ಹಿರಿಯ ಸದಸ್ಯರಾದ ಶ್ರೀ ಕೃಷ್ಣ ಸ್ವಾಮಿ ಕಂಡಡ್ಕ, ಶ್ರೀ ಚಂದ್ರಶೇಖರ ಮದಕ, ಶ್ರೀಮತಿ ವಾರಿಜ ಕೊರಗಪ್ಪ,ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ಅಭಿನಂದಿಸಿದರು. ಮಿತ್ರ ಯುವಕಮಂಡಲ ಅಧ್ಯಕ್ಷರಾದ ದಿನೇಶ್ ಮೂಡೆಕಲ್ಲು, ತುಳು ಕೂಟ ದ ಅಧ್ಯಕ್ಷರಾದ ನಾರಾಯಣ ಟೈಲರ್ ದುಗ್ಗಲಡ್ಕ ಹಾಗೂ ಜಂಟಿ ಸಂಘಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
- Tuesday
- December 3rd, 2024