Ad Widget

ಮರ್ಕಂಜ : ರೈತರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ರೈತ ಸಂಘದ ಗ್ರಾಮ ಘಟಕದ ಪುನರ್ ರಚನೆ

ಕರ್ನಾಟಕ ರಾಜ್ಯ ರೈತಸಂಘ ಸುಳ್ಯ ತಾಲೂಕು ಘಟಕದ ವತಿಯಿಂದ ವಾರಕ್ಕೊಂದು ಗ್ರಾಮಭೇಟಿ ಅಭಿಯಾನದ ಮುಂದುವರೆದ ಭಾಗವಾಗಿ ಮರ್ಕಂಜ ಗ್ರಾಮವನ್ನು ಡಿ.5 ರಂದು ಭೇಟಿ ಮಾಡಲಾಯಿತು. ಮರ್ಕಂಜ ಗ್ರಾಮದಲ್ಲಿ ಅಡಿಕೆ ಎಲೆ ಹಳದಿರೋಗ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರದ ಆಯ ಜಿಲ್ಲೆಯ ಇತರ ಸಮಸ್ಯೆಗಳ ಬಗ್ಗೆ ವಿಚಾರ ಸಂಕೀರ್ಣ ಹಾಗೂ ಗ್ರಾಮ ಘಟಕದ ಪುನರ್ ರಚನೆಯ ಸಭೆಯು ಸುಳ್ಯ ತಾಲೂಕು ಅಧ್ಯಕ್ಷರಾದ ಲೋಲಜಾಕ್ಷ ಗೌಡ ಭೂತಕಲ್ಲು ರವರ ಅಧ್ಯಕ್ಷತೆಯಲ್ಲಿ ಮರ್ಕಂಜ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು. ವಿಶೇಷ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ ಅಡಿಕೆ ಎಲೆಹಳದಿ ರೋಗದ ಹೆಸರಿನಲ್ಲಿ 25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವ ಘೋಷಣೆ ಮಾಡಿದ್ದು ಇದು ಸಂತ್ರಸ್ತ ರೈತರಿಗೆ ನೀಡುವ ಬದಲು ಸಂಶೋಧನೆಗೆ ಬಳಸುವ ಹುನ್ನಾರವನ್ನು ತೀವ್ರವಾಗಿ ಖಂಡಿಸಿದರು. ಅಡಿಕೆ ಎಲೆ ಹಳದಿ ರೋಗದಿಂದ ರೈತರಿಗಾದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಆದ ನಷ್ಟದ ಬಗ್ಗೆ ರೈತರಿಂದ ಸ್ವಯಂ ಅರ್ಜಿಯನ್ನು ಪಡೆದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕೃಷಿ ಆರ್ಥಿಕ ತಜ್ಞರಾದ ಟಿ.ಎನ್. ಪ್ರಕಾಶ್ ಕಮ್ಮರಡಿಯವರ ಮೂಲಕ ಸಮಗ್ರ ವರದಿಯನ್ನು ಸರಕಾರದ ಮುಂದಿಟ್ಟು ಪರಿಹಾರಕ್ಕಾಗಿ ಸರಕಾರವನ್ನು ಒತ್ತಾಯಿಸಲಿದ್ದೇವೆ. ಇದಕ್ಕೆ ಹಳದಿ ಎಲೆ ಬಾಧಿತ ಭಾಗದ ರೈತರ ಸಂಪೂರ್ಣ ಸಹಕಾರ ನೀಡಬೇಕೆಂದರು. ತಾಲೂಕು ಉಪಾಧ್ಯಕ್ಷರಾದ ಉಳುವಾರು ತೀರ್ಥರಾಮ ಗೌಡರು ಮಾತನಾಡಿ 1837 ರೈತ ಚಳುವಳಿಯ ಮಣ್ಣಿನಲ್ಲಿ ಮತ್ತೆ ರೈತರ ಧ್ವನಿ ಗಟ್ಟಿಯಾಗಬೇಕೇಂದು ವಿನಂತಿಸಿದರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ, ತಾಲೂಕು ಸಂಚಾಲಕರಾದ ಸೆಬಾಸ್ಟಿಯನ್ ಮಡಪ್ಪಾಡಿ, ಸಕ್ರೀಯ ಕಾರ್ಯಕರ್ತ ತೀರ್ಥರಾಮ ಬಾಳೆಕಜೆ ,ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಪುರ ಚಳುವಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ನೂತನ ಗ್ರಾಮ ಘಟಕವನ್ನು ಆಯ್ಕೆ ಮಾಡಲಾಯಿತು. ಗ್ರಾಮ ಘಟಕದ ಅಧ್ಯಕ್ಷರಾಗಿ ಮಾಧವ ಗೌಡ ದೊಡ್ಡಿಹಿತ್ಲು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್ ಕೊಯಿಂಗೋಡಿ ಆಯ್ಕೆಯಾದರು, ಸಂಘಟನಾ ಕಾರ್ಯದರ್ಶಿ ಯಾಗಿ ಶಶಿಧರ ಗೋಳ್ಯಾಡಿ, ಕೋಶಾಧಿಕಾರಿ ಯಾಗಿ ಆನಂದ ಗೌಡ ಪುರ ಹಾಗೂ ಉಪಾಧ್ಯಕ್ಷರುಗಳಾಗಿ ಪದ್ಮನಾಭ ಗೌಡ ಕುದನೆಕೋಡಿ, ಕುಸುಮಾಧರ ಪುರ ಆಯ್ಕೆಯಾದರು.
ಸಭಾಧ್ಯಕ್ಷರಾದ ಲೋಲಜಾಕ್ಷ ಗೌಡ ಭೂತಕಲ್ಲು ನೂತನ ಗ್ರಾಮ ಘಟಕಕ್ಕೆ ಸಂಘದ ಧ್ವಜವನ್ನು ನೀಡುವ ಮೂಲಕ ಆಧಿಕಾರ ಹಸ್ತಾಂತರ ಮಾಡಿ ಮಾತನಾಡಿದರು. ರೈತರು ಪಕ್ಷ,ಧರ್ಮಗಳನ್ನು ಮೀರಿ ಒಂದಾಗದಿದ್ದರೇ ನಮ್ಮ ಗ್ರಾಮೀಣ ಸಂಸ್ಕೃತಿ ಸಂಪೂರ್ಣ ನಶಿಸುವ ಕಳವಳ ವ್ಯಕ್ತಪಡಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ನೂತನ ಘಟಕಕ್ಕೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮರ್ಕಂಜ ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕೋಯಿಂಗೋಡಿ ಸ್ವಾಗತಿಸಿ, ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!