Ad Widget

ಡಿ.08 – ಡಿ.12: ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಬ್ರಹ್ಮಶ್ರೀ ಕೆ.ಯು ದಾಮೋದರ ತಂತ್ರಿಗಳವರ (ನೀಲೇಶ್ವರ) ನೇತೃತ್ವದಲ್ಲಿ ಡಿ.08 ಬುಧವಾರದಿಂದ ಷಷ್ಠಿ ಮಹೋತ್ಸವ ಆರಂಭಗೊಳ್ಳಲಿದ್ದು ಡಿ.12 ಆದಿತ್ಯವಾರದ ತನಕ ಜರುಗಲಿದೆ. ಡಿ.08 ಬುಧವಾರದಂದು ಪಂಚಮಿ ಪ್ರಯುಕ್ತ ಸಂಜೆ 06.30ರಿಂದ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ, ಆಸ್ತಿಕ ಬಂಧುಗಳು, ಸಂಘ ಸಂಸ್ಥೆಗಳು ಹಾಗೂ ಕಾಂಚೋಡು ಶ್ರೀ ಮಂಜುನಾಥೇಶ್ವರ ಸನ್ನಿಧಿಯಿಂದ ಹೊರೆಕಾಣಿಕೆ ಸ್ವೀಕಾರ ನಡೆಯಲಿದೆ. ಡಿ.09 ಗುರುವಾರದಂದು ಷಷ್ಠಿ ಮಹೋತ್ಸವ ಪ್ರಯುಕ್ತ ಪೂರ್ವಾಹ್ನ ಗಂಟೆ 7.00ರಿಂದ ಮಹಾಗಣಪತಿ ಹೋಮ, ಚಂಡಿಕಾ ಹೋಮ, ನವಕಲಶ, ಶತರುದ್ರಾಭಿಷೇಕ, ಪಲ್ಲಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 06.00ರಿಂದ ತಾಯಂಬಕಂ-ನೇರಳತ್ತಾಯ ದೈವದ ಭಂಡಾರ ತೆಗೆಯುವುದು, ಮಹಾಪೂಜೆ, ಶ್ರೀ ಬಲಿ ಉತ್ಸವ, ಪ್ರಸಾದ ವಿತರಣೆ ಬಳಿಕ ನೇರಳತ್ತಾಯ ದೈವದ ನೇಮ ಜರುಗಲಿದೆ. ಡಿ.10 ಶುಕ್ರವಾರದಂದು ಪೂರ್ವಾಹ್ನ ಗಂಟೆ 06.30ಕ್ಕೆ ಶುದ್ಧಿ ಕಾರ್ಯಗಳು, ಪೂರ್ವಾಹ್ನ ಗಂಟೆ 10.00ರಿಂದ ಶ್ರೀ ದೈವ ರಕ್ತೇಶ್ವರಿ ತಂಬಿಲ ಸೇವೆ, ಭಂಡಾರ ತೆಗೆಯುವುದು ನಡೆಯಲಿದೆ. ಮಧ್ಯಾಹ್ನ ಶ್ರೀ ದೇವರಿಗೆ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 07.00ರಿಂದ ಶ್ರೀ ದೇವರಿಗೆ ಮಹಾಪೂಜೆ, ರಂಗಪೂಜೆ, ಶ್ರೀ ರಕ್ತೇಶ್ವರಿ ದೈವದ ನೇಮ ಸೇವೆ ನಡೆಯಲಿರುವುದು. ಡಿ.11 ಶನಿವಾರದಂದು ರಾತ್ರಿ ಗಂಟೆ 7.00ರಿಂದ ಶ್ರೀ ಸನ್ನಿಧಿಯಲ್ಲಿ ಮಹಾಪೂಜೆ, ಉಳ್ಳಾಕುಲು, ಚಾಮುಂಡಿ ದೈವಗಳ ಭಂಡಾರ ತೆಗೆಯುವುದು, ಪ್ರಸಾದ ಭೋಜನ ಬಳಿಕ ಸ್ಥಳೀಯ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಶ್ರೀರಾಮ ದರ್ಶನ ಪ್ರದರ್ಶನಗೊಳ್ಳಲಿದೆ. ಆ ಬಳಿಕ ಉಳ್ಳಾಕುಲು ದೈವದ ನೇಮ ಜರುಗಲಿದೆ. ಡಿ.12 ಆದಿತ್ಯವಾರದಂದು ಪೂರ್ವಾಹ್ನ ಗಂಟೆ 08.30ರಿಂದ ಚಾಮುಂಡಿ ದೈವದ ನೇಮೋತ್ಸವ, ಪೂರ್ವಾಹ್ನ ಗಂಟೆ 10.00ರಿಂದ ಗಣಗಳ ನೇಮ, ಮಧ್ಯಾಹ್ನ ಗಂಟೆ 12.30ರಿಂದ ಶ್ರೀ ಸನ್ನಿಧಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಆಡಳಿತ ಧರ್ಮದರ್ಶಿ ಕೆದ್ಲ ನರಸಿಂಹ ಭಟ್ ವಿನಂತಿಸಿದ್ದಾರೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!