
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆಸುಬ್ರಹ್ಮಣ್ಯದ ವತಿಯಿಂದ ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು. ಕಡಬ, ಇಚ್ಲಂಪಾಡಿ, ಗುಂಡ್ಯ, ಗುತ್ತಿಗಾರು ಮಾರ್ಗದಲ್ಲಿ ಬಸ್ಸಿನ ಸಮಸ್ಯೆ ಎದುರಾಗಿದ್ದು, ಈ ಭಾಗದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಈ ಮಾರ್ಗದಲ್ಲಿ ಬಸ್ ಒದಗಿಸುವಂತೆ ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು.

ಪ್ರತಿಭಟನೆಯ ಅಂಗವಾಗಿ ವನದುರ್ಗ ದೇವಸ್ಥಾನದಿಂದ ಜಾಥಾ ಹೊರಟು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟಣೆ ಮಾಡಲಾಯಿತು. ನಿಕಟಪೂರ್ವ ನಗರ ಕಾರ್ಯದರ್ಶಿ ಪ್ರಕಾಶ್ ಬಾಳುಗೋಡು ರವರು ಪ್ರತಿಭಟನೆಯ ಕುರಿತು ಮಾತನಾಡಿದರು ಹಾಗೂ ಪುತ್ತೂರು ಜಿಲ್ಲಾ ಸಂಚಾಲಕರಾದ ಹಿತೇಶ್ ಕಟ್ರಮನೆ , ರಾಜ್ಯ ಕಾರ್ಯಕಾರಣಿ ಸದಸ್ಯೆಯಾದ ಮಂದಾರ ಬಾಳುಗೋಡು, ಹಿರಿಯ ಕಾರ್ಯಕರ್ತರಾದ ರಕ್ಷಿತ್ ಪರಮಲೆ ಹಾಗೂ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.