
ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಟೆಲು ಅಡಿಕೆಹಿತ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ಮರದ ದಿಮ್ಮಿಗಳಿಂದ ತುಂಬಿದ್ದು, ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ಇದನ್ನು ಮನಗಂಡ ದೊಡ್ಡತೋಟ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಡಿಸೆಂಬರ್ 02 ರಂದು ಈ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಸಮೀಪದ ಮನೆಯವರಾದ ಶಕುಂತಳಾ ಭಟ್ ಅಡಿಕೆಹಿತ್ಲು ಎಂಬುವವರು ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಿದರು. ಈ ಸ್ವಚ್ಛತಾ ಕಾರ್ಯದಲ್ಲಿ ಸ್ವಯಂ ಸೇವಕರಾದ ವೇಣುಗೋಪಾಲ್, ಅಚ್ಯುತ, ಸುಂದರ ಚೊಕ್ಕಾಡಿ, ಪ್ರಸಾದ್ ಶ್ರೇಣಿ, ಭುವನ್ ಚೊಕ್ಕಾಡಿ, ವೆಂಕಟ್ರಮಣ.ಡಿ.ಜಿ, ಮೋಹನ್ ಮರ್ಕಂಜ ಮುಂತಾದವರು ಭಾಗವಹಿಸಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ