Ad Widget

ಬೆಳ್ಳಾರೆಯ ಪ್ರಶಾಂತ ಶೆಟ್ಟಿ ಕೈ ಚಳಕ – ಕಡಿಮೆ ವೆಚ್ಚದ ಸ್ಯಾನಿಟೈಸರ್ ಸ್ಟಾಂಡ್ ನಿರ್ಮಾಣ

ವಿಶ್ವದ್ಯಾಂತ ಪಸರಿಸಿದ ಮಹಾಮಾರಿ ಕೊರೊನಾದಿಂದ ಬೆಳ್ಳಾರೆ ಸಮೀಪದ ಮನೆಯೊಂದು ಸೀಲ್ ಡೌನ್ ಆದ ಬೆನ್ನಲ್ಲೇ ದೇವಿ ಹೈಟ್ಸ್ ಸಂಕೀರ್ಣ ದಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ

. . . . .

ಬೆಳ್ಳಾರೆ ಮೇಲಿನ‌ ಪೇಟೆಯಲ್ಲಿ ಕಾರ್ಯವರಿಸುತ್ತಿರುವ ಅಮ್ಮು ರೈ ಕಾಂಪ್ಲೇಕ್ಸ್, ದೇವಿ ಹೈಟ್ಸ್ ಅತೀ ಹೆಚ್ಚು ವ್ಯವಹಾರಿಕ ಕಟ್ಟಡದಲ್ಲಿ ಸೂಪರ್ ವೈಸರ ಆಗಿ ದುಡಿಯುತ್ತಿರುವ ಪ್ರಶಾಂತ್ ಶೆಟ್ಟಿ ಎಂಬ ಯುವಕ ಭಯಾನಕ‌ ಕೊರೋನಾ ಜಾಗೃತಿಗಾಗಿ ಸರಳವಾಗಿ ಅತೀ ಕಡಿಮೆ ವೆಚ್ಚದಲ್ಲಿ ಪ್ರತೀ ಅಂಗಡಿಯ ಮುಂಭಾಗದಲ್ಲಿ ಪಿವಿಸಿ ಪೈಪ್ ನಿಂದ ನಿರ್ಮಿತವಾದ ಸ್ಯಾನಿಟೈಸರ್ ಸ್ಟಾಂಡ್ ನ್ನು ನಿರ್ಮಿಸಿದ್ದಾರೆ.

ಈಗಾಗಲೇ ಕಳೆದ ಕೆಲವು ತಿಂಗಳಿನಿಂದ ಅಂಗಡಿಗಳು ನಷ್ಷದಲ್ಲಿದ್ದು, ಮತ್ತೆ ಅವರು ಹೊರಗಿನಿಂದ ಇಂಥಹ ವ್ಯವಸ್ತಿತ ಸ್ಟಾಂಡ್ ಖರೀದಿಸಲು ಸುಮಾರು 2 ರಿಂದ 3 ಸಾವಿರ ತಗಲಬಹುದು.

ಇತ್ತೀಚಿನ‌ ಸಂದಿಗ್ದ ಪರಿಸ್ಥಿತಿಯನ್ನು ತನ್ನ ಮನದಲ್ಲಿಟ್ಟು ಅಂಗಡಿಯವರಿಗೆ ಇನ್ನಷ್ಟು ಭಾರವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಸ್ಟಾಂಡ್ ರಚಿಸಿದ್ದೇನೆ.
ಕೇವಲ 300 ರುಪಾಯಿ ವೆಚ್ಚದಲ್ಲಿ ‌ನಿರ್ಮಿಸಿದ್ದೇನೆ ಎನ್ನುತ್ತಾರೆ ಸ್ಟಾಂಡ್ ನಿರ್ಮಿಸಿದ ಪ್ರಶಾಂತ್ ಶೆಟ್ಟಿ ಲಾಕ್ ಡೌನ್ ಸಂಧರ್ಭದಲ್ಲಿ ದೇವಿ ಹೈಟ್ಸ್ ಮಾಲಕರಾದ ರಾಕೇಶ್ ಶೆಟ್ಟಿ ಲಕ್ಷಾಂತರ ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆದ ಬೆನ್ನಲೇ ದೇವಿ ಹೈಟ್ಸ್ ಸೂಪರ್ ವೈಸರ್ ಪ್ರಶಾಂತ್ ಶೆಟ್ಟಿಯವರ
ಈ ಮಾನವೀಯತೆಯ ಮುಖ ಅನಾವರಣ ಗೊಂಡಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!