ಮುದ್ದು ಮುದ್ದು ಮಾತಿನಲ್ಲೆ ಆಕರ್ಷಿಸುತ್ತಾ ,ತನ್ನ ಪ್ರತಿಭೆಯ ಮೂಲಕ ಸುಳ್ಯ ತಾಲೂಕಿಗೆ ಹೆಮ್ಮೆಯ ಗರಿಯಾಗುವ ಕನಸ ಹೊತ್ತು ಹೊರಟಿರುವ ಪುಟ್ಟ ಬಾಲೆಯ ಸಾಧನೆಯಿದು.
ಒಂದು ಕಲ್ಲು ಸುಂದರ ಶಿಲೆಯಾಗಿ ರೂಪುಗೊಳ್ಳಬೇಕಾದರೆ ಶಿಲ್ಪಿಯ ಏಟುಗಳನ್ನು ಸಹಿಸಿಕೊಳ್ಳಲೇಬೇಕು. ಅಂತೆಯೇ ಪ್ರತಿಯೊಂದು ವ್ಯಕ್ತಿಯ ಪ್ರತಿಭೆಯೂ ಜಗದ ಮುಂದೆ ಅನಾವರಣಗೊಳ್ಳಬೇಕಾದರೆ ಬಂದ ಸೋಲುಗಳನ್ನು ಎದುರಿಸಿ ಮುನ್ನಡೆದರೆ ಮಾತ್ರ ಸಾಧ್ಯ.
ನೃತ್ಯ, ಸಂಗೀತ, ಚಿತ್ರ ಕಲೆ,ನಟನೆ ಹೀಗೆ ಹತ್ತು ಹಲವಾರು ವಿಭಿನ್ನ ಪ್ರತಿಭೆಗಳ ಒಡತಿ , ಅದ್ಬುತ ಪ್ರತಿಭೆ ಈ ನಮ್ಮ ಸುಳ್ಯದ ಮಾತಿನ ಮಲ್ಲಿ 12ರ ಹರೆಯದ ಪುಟ್ಟ ಪೋರಿ ಈ ಮನ್ವಿತ.
ಇವರು ಸಂಗೀತವನ್ನು ಗಾನಸಿರಿ ಡಾ.ಕಿರಣ್ ಕುಮಾರ್ ರವರ ಬಳಿ ಸತತ 2ವರ್ಷದಿಂದ ಕಲಿಯುತ್ತಿದ್ದು ಗಾನ ಸಿರಿ ವೇದಿಕೆಯಲ್ಲಿ ಮಿಂಚುವುದರ ಜೊತೆಯಲ್ಲಿ ಹಲವಾರು ಸ್ಪರ್ಧೆಯಲ್ಲಿಯೂ ಭಾಗವಹಿಸಿರುತ್ತಾರೆ.
ಕೋವಿಡ್ 19 ರ ಸಂಧಿಗ್ದ ಪರಿಸ್ಥಿತಿಯಲ್ಲಿಯೂ ಈ ಪ್ರತಿಭೆ ಕೈ ಕಟ್ಟಿ ಕುಳಿತುಕೊಳ್ಳದೆ Gifted Singer’s of Karnataka , ಸಪ್ತ ಸ್ವರ ಸಂಗೀತ ಬಳಗ ಬೆಳಗಾವಿ ,
ನಮ್ಮ ಕಲಾ ವಾಹಿನಿ
ಸುಮಧುರ ಫೌಂಡೇಷನ್ ,
ಟು ಟಿವಿ ಚಾನೆಲ್ ನಲ್ಲಿ ಭಾಗವಹಿಸಿರುತ್ತಾರೆ.
ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ
ಕಲಾಶ್ರೀ ಪ್ರಶಸ್ತಿ ,
Chance To Dance season 2
ತುಳುನಾಡ ಜವನೆರ್ ಬೆಂಗಳೂರು ಅರ್ಪಿಸುವ
ನಲಿಪು ನವಿಲೆ ನೃತ್ಯ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಮೆಚ್ಚುಗೆ ಪಡೆದಿರುವುದು ಇವರ ಸಾಧನೆಯ ಪುಟದಲ್ಲಿ ಸೇರಿಕೊಂಡಿದೆ. ಜೂನಿಯರ್ ಮಹಾರಾಜ
ಆಡಿಷನ್ ನಲ್ಲಿಯೂ ಭಾಗವಹಿಸಿರುತ್ತಾರೆ.
ಸಂತೋಷ್ ಕುಮಾರ್ ಮಂಗಳೂರು ಇವರ ಬಳಿ 1ವರ್ಷ 3 ತಿಂಗಳಿನಿಂದ ನೃತ್ಯಭ್ಯಾಸ ಮಾಡುತ್ತಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ ತನ್ನ ನೃತ್ಯದ ಮೂಲಕ ಮನರಂಜಿಸಿರುವ ಸುಳ್ಯದ ಪ್ರತಿಭೆ ಮನ್ವಿತಾ.
ಕಲಾತ್ಮಕ ಜಗತ್ತು ಸಂಸ್ಥೆ ಆಯೋಜಿಸಿದ ಮಕ್ಕಳ ದಿನಾಚರಣೆಯ ಪ್ರಯುಕ್ತ ಭಾವಕೋಗಿಲೆ -2021 ಭಾವಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ 41 ಮಕ್ಕಳಲ್ಲಿ ಇವರು ದ್ವೀತಿಯ ಸ್ಥಾನ ಪಡೆದು ಟ್ರೋಪಿ ತಮ್ಮದಾಗಿಸಿಕೊಂಡರು.
ವಿಶ್ವ ಸಕಲಕಲಾ ಸಾಂಸ್ಕೃತಿಕ ಭಾರತ
ಹಾಗೂ ವಿಶ್ವ ಬಂಜರ ಸಂಸ್ಕತಿ ಭಾರತ
ನೃತ್ಯ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ
ಭಾಗವಹಿಸಿ ಮೆಚ್ಚುಗೆ ಸ್ಥಾನ ಪಡೆದು ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾಳೆ.
ನಟನಾ ಕ್ಷೇತ್ರಕ್ಕೆ ಬಂದರೆ ಇವರು 1 ವರ್ಷದಿಂದ ನಾಟಕದಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಒಂದು ಡಲಿಯನ ಡೋಲು ನಾಟಕ ದಲ್ಲಿ ಅದ್ಭುತವಾಗಿ ನಟಿಸಿ ಮುಂದೊಂದು ದಿನ ಅಭಿನಯ ಶಾರದೆಯಾಗುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.
ಇವರು “ನಿಂದು ಒಂದು ಪ್ರೀತಿನ ಚಿನ್ನಿ” ಮೂವಿಯಲ್ಲಿ ತಂಗಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಪ್ರಿವಂತ ಕ್ರಿಯೇಟಿವ್ ಸೆಂಟರ್ ನಿರ್ಮಾಣದ ಉತ್ತಮ ಸಂದೇಶವನ್ನು ಸಾರುವ “ಸಾಧನೆಯ ಜೊತೆ”ಎಂಬ ಕನ್ನಡ ಆಲ್ಬಮ್ ಸಾಂಗ್ ಹಾಡಿ ಅಭಿನಯಿಸಿರುತ್ತಾರೆ.
ಸಣ್ಣ ವಯಸ್ಸಿಗೆ ಒಂದು ಅದ್ಬುತ ಪ್ರತಿಭೆಯಾಗಿ ಮಿಂಚುತ್ತಿರುವ ಮನ್ವಿತ ಅವರಲ್ಲಿದ್ದ ಭಕ್ತಿ. ಶ್ರದ್ಧೆ ಹಾಗೂ ಕಲಿಯಬೇಕು ಎನ್ನುವ ಆಸಕ್ತಿ ಅವರನ್ನು ಓರ್ವ ಅದ್ಬುತ ಪ್ರತಿಭೆಯನ್ನಾಗಿಸಿದೆ ಎಂದರೆ ತಪ್ಪಾಗಲಾರದು.
ಸುಳ್ಯದ ಕುಕ್ಕಾಜೆಕಾನ ಮನೆ ದಯಾನಂದ – ನಳಿನಿ ದಂಪತಿಗಳ ಪುತ್ರಿಯಾಗಿರುವ ಈಕೆ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕ ದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಗೊಲ್ಡ್ ಆಫ್ ವರ್ಲ್ಡ್ ರೆಕಾರ್ಡ್ ಪಡೆದಿರುವ ಇವರು ಇನ್ನು ಹೆಚ್ಚಿನ ಸಾಧನೆ ಮಾಡುವಲ್ಲಿ ಯಶಸ್ವಿಯಾಗಲಿ. ಈಗಾಗಲೇ ಹಲವಾರು ಸನ್ಮಾನ ಪ್ರಶಸ್ತಿಗಳು ಇವರನ್ನರಸಿ ಬಂದಿದೆ.ಸಂಗೀತ ಕ್ಷೇತ್ರ , ಡ್ಯಾನ್ , ನಟನೆ , ಚಿತ್ರಕಲೆ , ಆಟ -ಪಾಠ ಎಲ್ಲದರಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವಂತಹ ಈ ಪುಟ್ಟ ಪೋರಿಯ ಸಾಧನೆ ತುಂಬಾ ದೊಡ್ಡದು ಅದೇ ರೀತಿ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬ ಆಶಯ ನಮ್ಮದು.
ಈ ಅದ್ಭುತ ಪ್ರತಿಭೆಗೆ ಇನ್ನಷ್ಟು ಗೆಲುವು ಸಿಗಲಿ. ಪರಿಶ್ರಮಕ್ಕೆ ತಕ್ಕ ಯಶಸ್ಸು ದೊರಕಲಿ.
🖊️ನಾಗೇಶ್ ಬೆಳ್ಳಾರೆ