Ad Widget

ಡಿ.13ರಂದು ವಿಹಿಂಪ ಬಜರಂಗದಳ ವತಿಯಿಂದ ಸುಳ್ಯದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ – ಬೆಳ್ಳಾರೆ ವಾಲ್ಮೀಕಿ ಶಾಖೆಯಿಂದ ಇಂದು ಕರಪತ್ರ ಬಿಡುಗಡೆ

ವಿಶ್ವಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ
ಸುಳ್ಯ ಪ್ರಖಂಡ ವತಿಯಿಂದ ಗೀತಾ ಜಯಂತಿ ಅಂಗವಾಗಿ ಐತಿಹಾಸಿಕ ಹಿಂದುತ್ವದ ಭದ್ರಕೋಟೆ ಸುಳ್ಯದಲ್ಲಿ ಡಿ.13ರಂದು ಜರುಗಲಿರುವ ಶೌರ್ಯ ಸಂಚಲನ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮವು ಬೆಳ್ಳಾರೆಯ ವಾಲ್ಮೀಕಿ ಶಾಖೆ ವತಿಯಿಂದ ಇಂದು(ನ.25) ನಡೆಯಿತು. ಕಾರ್ಯಕ್ರಮವು ಸಂಜೆ 7 ಗಂಟೆಗೆ ಸರಿಯಾಗಿ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. ಉದ್ಯಮಿ ರಾಜೇಶ್ ಮಣಿಕ್ಕಾರ ಕರಪತ್ರ ಬಿಡುಗಡೆಗೊಳಿಸಿದರು. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಬಜರಂಗದಳ ಜಿಲ್ಲಾ ಸಹಸಂಯೋಜಕ್ ಲತೀಶ್ ಗುಂಡ್ಯ, ಬಜರಂಗದಳ ಬೆಳ್ಳಾರೆ ವಲಯ ಸಂಚಾಲಕ ಸಚಿನ್ ರೈ ಪೂವಾಜೆ, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹಾಗೂ ಹಿಂದೂ ಸಂಘಟನೆಯ ಪ್ರಮುಖರುಗಳಾದ ಮನೋಜ್ ರೈ ಕೊಳಂಬಳ, ವಸಂತ ಉಲ್ಲಾಸ್, ಶ್ರೀಜಿತ್ ರೈ ಮಣಿಕ್ಕರ, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ಅಭಿಲಾಷ್ ಬೆಳ್ಳಾರೆ , ಭರತ್ ಭಂಡಾರಿ, ರಂಜಿತ್ ಬಾಳಿಲ, ವಿಜೇಶ ನೆಟ್ಟಾರು ಹಾಗೂ ಹಲವಾರು ಹಿಂದೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading