ತಮಿಳುನಾಡಿಗೆ ಕೆಲಸ ನಿಮಿತ್ತ ತೆರಳಿದ್ದ ಸುಳ್ಯ ತಾಲೂಕಿನ ಏಳು ಮಂದಿ ಯುವಕರು ಲಾಕ್ ಡೌನ್ ಆದ ದಿನದಿಂದ ಊರಿಗೆ ಮರಳಲಾಗದೆ ಸಂಕಷ್ಟದಲ್ಲಿದ್ದರು. ತಮಿಳುನಾಡಿನಲ್ಲಿಯೇ ಎರಡು ತಿಂಗಳಿಗಿಂತಲೂ ಹೆಚ್ಚು ದಿನಗಳು ಕೆಲಸವಿಲ್ಲದೆ ಕಳೆದಿದ್ದು,ಮುಂದಕ್ಕೆ ಅಲ್ಲಿಯೇ ದಿನದೂಡಲು ಅಥವಾ ಊರಿಗೆ ಬರಲು ಖರ್ಚಿಗೆ ಹಣವಿಲ್ಲದೆ ಸಂಕಷ್ಟದಲ್ಲಿರುವಾಗ ಸುಳ್ಯ ದ ಎಸ್ಸೆಸ್ಸೆಫ್ ನ ನಾಯಕರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಹಾಯವನ್ನು ಕೋರಿದರು. ಅದರಂತೆ ಅವರನ್ನು ಕರೆತಂದು ಸುಳ್ಯದಲ್ಲಿ ಕ್ವಾರಂಟೈನ್ ತಾಲೂಕು ಆಡಳಿತ ಇರಿಸಲಾಯಿತು. ಅವರ ಯಾತ್ರಾ ಖರ್ಚಿಗೆ ಸಹಾಯ ಹಾಗೂ ಅವರಿಗೆ ಕ್ವಾರಂಟೈನ್ ನಲ್ಲಿರುವಾಗ ಬೇಕಾದ ಆಹಾರ ಎಲ್ಲವನ್ನೂ ಉಚಿತವಾಗಿ ಎಸ್ಸೆಸ್ಸೆಫ್ ಹಾಗೂ ಎಸ್ ವೈ ಎಸ್ ತುರ್ತು ಸೇವಾ ತಂಡದ ವತಿಯಿಂದ ಮಾಡಿ. ರಂಝಾನ್ ತಿಂಗಳ ಉಪವಾಸಕ್ಕೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಉತ್ತಮ ಆಹಾರ ವ್ಯವಸ್ಥೆಯನ್ನು ಸಮಯೋಚಿತವಾಗಿ ತಲುಪಿಸಲಾಗಿದೆ ಎಂದು ಸಂಘಟಕರು ಪತ್ರಿಕೆಗೆ ಹೇಳಿಕೆಯನ್ನು ನೀಡಿರುತ್ತಾರೆ.ತುರ್ತು ಸೇವಾ ತಂಡದ ಸದಸ್ಯರು ಇದಕ್ಕಾಗಿ ಉತ್ತಮ ಕಾರ್ಯಾಚರಣೆ ನಡೆಸಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾದರು.
- Saturday
- November 23rd, 2024