
ಗುತ್ತಿಗಾರಿನ ಸ್ವಾತಿ ಸಂಕೀರ್ಣದಲ್ಲಿ ನ.22 ರಂದು ಚಿಕ್ಕ ಮಕ್ಕಳ ಆರೈಕೆ ಕೇಂದ್ರ “ಚಿಣ್ಣರ ಮನೆ” ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು.ಗಣಪತಿ ಹೋಮ ವನ್ನು ವೇದಮೂರ್ತಿ ಶಿವಸುಬ್ರಹ್ಮಣ್ಯ ಜೋಯಿಸ ನೆರವೇರಿಸಿದರು.ಸ್ವಾತಿ ಕೃಷಿ ಲಿಂಕ್ಸ್ ನ ಎಂ ಸುಬ್ರಹ್ಮಣ್ಯ ಭಟ್ ಮತ್ತು ಬಾಲಸುಬ್ರಹ್ಮಣ್ಯ ಭಟ್, ಸಂಜೀವಿನಿ ಸಂಘದ ಗುತ್ತಿಗಾರು ಪ್ರೇರಖಿ ಮಿತ್ರಕುಮಾರಿ ಚಿಕ್ಮುಳಿ, ದಿವ್ಯ ಚತ್ರಪ್ಪಾಡಿ, ತಿರುಮಲೇಶ್ವರ ಭಟ್,ಮಿಥುನ್ ತುಪ್ಪದಮನೆ, ಭವಾನಿ ಭೀಮಗುಳಿ, ಲತಾಶಿವಪ್ರಸಾದ್ ಮಾವಿನಕಟ್ಟೆ, ಅಕ್ಷತ ಪೈಕ, ಯೋಗೀಶ ಹಾಗೂ ಸಿದ್ಧಿದಾತ್ರಿ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಚಿಣ್ಣರ ಮನೆಯ ಮುಖ್ಯಸ್ಥರಾದ ದಿವ್ಯ ಸುಜನ್ ಗುಡ್ಡೆಮನೆ, ಪವಿತ್ರ ತುಪ್ಪದಮನೆ ಉಪಸ್ಥಿತರಿದ್ದರು.