ರೈತ ವಿರೋಧಿ ಮೂರು ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆಯುದಾಗಿ ನಮ್ಮ ಪ್ರಧಾನಿಯವರು ಈಗಾಗಲೇ ಘೋಷಿಸಿದ್ದು ಇದು ಕೇವಲ ಭರವಸೆಯಾಗಿ ಉಳಿಯಬಾರದು ರೈತರ ಸ್ವಾಭಿಮಾನಕ್ಕೆ ಮತ್ತೆ ಧಕ್ಕೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಸುಳ್ಯ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹೇಳಿದರು.
ಮೂರು ಕೃಷಿ ಮಸೂದೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದುಕೊಳ್ಳುವ ಭರವಸೆ ನೀಡಿರುವ ಹಿನ್ನಲೆಯಲ್ಲಿ ಅವರು ರೈತ ಸಂಘದ ಕಚೇರಿಯಲ್ಲಿ ಸಿಹಿ ತಿಂಡಿಗಳನ್ನು ಹಂಚಿ ಸಂಭ್ರಮ ಆಚರಿಸಿ ಬಳಿಕ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಪರಿಹಾರ ಮತ್ತು ಸರಕಾರಿ ಉದ್ಯೋಗ ಕೊಡಬೇಕೆಂದು ಅವರು ಒತ್ತಾಯಿಸಿದರು.
ಸುಳ್ಯ ತಾಲೂಕು ಸಂಘದ ಕಾರ್ಯದರ್ಶಿ ರತ್ನಾಕರ ಅವರು ಮಾತನಾಡಿ ಸರಕಾರ ಮೊದಲೆ ಆಲೋಚನೆ ಮಾಡುತ್ತಿದ್ದರೆ ಇಷ್ಟೆಲ್ಲ ಸಾವು ನೋವು ಗೊಂದಲಗಳು ನಡೆಯುತ್ತಿರಲಿಲ್ಲ. ಇನ್ನು ಮುಂದೆ ಸರಕಾರ ಇಂಥ ಸಮಸ್ಯೆಗಳಿಗೆ ಅವಕಾಶ ಮಾಡಿ ಕೊಡಬಾರದೆಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ತೀರ್ಥರಾಮ ಪರ್ನೋಜಿ, ಸುಳ್ಯ ಕೋಡಿ ಮಾಧವ ಗೌಡ, ಜಿಲ್ಲಾ ಉಪಾಧ್ಯಕ್ಷ ದಿವಾಕರ ಪಯಿ, ಸಂಚಾಲಕ ಸ್ಟೇಬಾಸ್ಟಿನ್,ಖಜಾಂಜಿ ದೇವಪ್ಪ ಕುಂದಲ್ಪಾಡಿ,ಜತೆ ಕಾರ್ಯದರ್ಶಿ ಚೆನ್ನಕೇಶವ, ತೊಡಿಕಾನ ವಲಯ ಅಧ್ಯಕ್ಷ ಕೇಶವಪ್ರಸಾದ್ ತೊಡಿಕಾನ, ಪ್ರಮುಖರಾದ ರಾಜೇಶ್ ಭಟ್ ತೊಡಿಕಾನ, ತೀರ್ಥರಾಮ ಬಾಳಕಜೆ, ರಾಮಕೃಷ್ಣ ಕುಂಟು ಕಾಡು, ಗುರು ಪ್ರಕಾಶ್ ನಾರ್ಕೋಡು,ಶಿವಪ್ರಸಾದ್, ರವೀಂದ್ರ ಪಂಜಿಕೋಡಿ, ತಿಮ್ಮಯ್ಯ ಮೆತ್ತಡ್ಕ ಇತರರು ಉಪಸ್ಥಿತರಿದ್ದರು.
- Friday
- November 1st, 2024