
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಇದರ ವಾರ್ಷಿಕ ಮಹಾಸಭೆಯು ನ.12ರಂದು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಂ.ಜೆ ಇವರ ಅಧ್ಯಕ್ಷತೆಯಲ್ಲಿ ಸ್ಕೌಟ್ಸ್ ಭವನ ಸುಳ್ಯ ಇಲ್ಲಿ ನಡೆಯಿತು.
ಸಭೆಯಲ್ಲಿ ಕಳೆದ ವರ್ಷದ ವರದಿಯನ್ನು ಕಾರ್ಯದರ್ಶಿ ಶ್ರೀ ಲಿಂಗಪ್ಪ ಬೆಳ್ಳಾರೆ ವಾಚಿಸಿದರು. ವಾರ್ಷಿಕ ಹಣಕಾಸಿನ ಆಯವ್ಯಯವನ್ನು ಖಜಾಂಜಿ ಶ್ರೀಮತಿ ರೇವತಿ.ಕೆ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀಮತಿ ವೀಣಾ.ಎಂ.ಟಿ ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ವರ್ಷದುದ್ದಕ್ಕೂ ಉತ್ತಮ ಕಾರ್ಯಕ್ರಮ ಸಂಘಟಿಸಿದ ಸ್ಥಳೀಯ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಶ್ರೀ ರಾಮಶೇಷ ಶೆಟ್ಟಿಯವರು ಸ್ಥಳೀಯ ಸಂಸ್ಥೆಯ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಶ್ರೀ ಎಂ.ಜಿ.ಕಜೆಯವರು “ನಿಸ್ವಾರ್ಥವಾಗಿ ಶಿಕ್ಷಕರು ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹ” ಎಂದು ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಯೋಜಕರಾದ ಶ್ರೀ ಭರತ್ ರಾಜ್.ಕೆ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಬಾಪೂ ಸಾಹೆಬ್, ಶಿಕ್ಷಣ ಸಂಯೋಜಕರಾದ ಶ್ರೀ ವಸಂತ ಏನೆಕಲ್, ಉಪಾಧ್ಯಕ್ಷರಾದ ಶ್ರೀ ಮಾಧವ ಗೌಡ, ಶ್ರೀಮತಿ ಮಹಾಲಕ್ಷ್ಮೀ ಕೊರ್ಬಂಡ್ಕ, ಗೈಡ್ಸ್ ಎ.ಡಿ.ಸಿ ಶ್ರೀಮತಿ ಪ್ರೇಮಾಲತಾ, ಶ್ರೀ ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅತ್ಯುತ್ತಮ ಗೈಡ್ ಕ್ಯಾಪ್ಟನ್ ಶ್ರೀಮತಿ ಪ್ರತಿಭಾ.ಎಸ್.ಆಳ್ವ, ಗೈಡ್ಸ್ ಗಳಾದ ಕುಮಾರಿ ಕನ್ನಿಕಾ.ಡಿ ಅಂಬೆಕಲ್ಲು ಹಾಗೂ ಶುಭದಾ ಆರ್.ಪ್ರಕಾಶ್ ಇವರನ್ನು ಅಭಿನಂದಿಸಲಾಯಿತು. ಸ್ಕೌಟರ್ ಶ್ರೀ ಸುಬ್ರಹ್ಮಣ್ಯ ಕೆ.ಎನ್ ಅತಿಥಿಗಳನ್ನು ಸ್ವಾಗತಿಸಿದರು. ಸ್ಥಳೀಯ ಸಂಸ್ಥೆಯ ಸಂಘಟಕ ಶ್ರೀ ವಸಂತ ಏನೆಕಲ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ಕೌಟರ್ ,ಗೈಡರ್ ಹಾಗೂ ಬನ್ನಿ ಆಂಟಿಗಳಿಗೆ ಪುನರ್ಚೇತನ ಶಿಬಿರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಭರತ್ ರಾಜ್.ಕೆ.ಮತ್ತು ಶ್ರೀ ಸುಬ್ರಹ್ಮಣ್ಯ ಕೆ.ಎನ್ ಸಹಕರಿಸಿದರು.