ಹರಿಹರ ಪಲ್ಲತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪಾಠ ಪ್ರವಚನ ಸರಿಯಾಗಿ ನಡೆಸುತ್ತಿಲ್ಲ, ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ತಾವೇ ಶಾಲೆಗೆ ಬಂದು ಪ್ರತಿಭಟನೆ ನಡೆಸಿದ ಘಟನೆ ನಿನ್ನೆ(ನ.16) ನಡೆದಿದ್ದು, ಇಂದು(ನ.17) ವಿದ್ಯಾರ್ಥಿಗಳು ಶಾಲೆಗೆ ಬಾರದೆ ಶೂನ್ಯ ಹಾಜರಾತಿ ಆಗಿದೆ. ನಿನ್ನೆ ದಿನ ಕ್ಷೇತ್ರ ಶಿಕ್ಷಣಾಧಿಕಾರಿ ಹರಿಹರ ಪಲ್ಲತ್ತಡ್ಕ ಶಾಲಾ ಪೋಷಕರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ಆದರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ತಯಾರಾಗಿಲ್ಲ.
ನಿನ್ನೆ ಓರ್ವ ಶಿಕ್ಷಕರು ಡೆಪ್ಯೂಟೇಶನ್ ಮೇಲೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹಾಗೂ ಅಲ್ಲಿದ್ದ ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸಿದ್ದಾರೆ. ಇಲ್ಲಿನ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವುದಾಗಿ ಶಿಕ್ಷಣಾಧಿಕಾರಿಯವರು ಭರವಸೆ ನೀಡಿದ್ದರು.
ಆದರೆ ಪಟ್ಟುಬಿಡದ ಪೋಷಕರು ಪರ್ಮನೆಂಟ್ ಶಿಕ್ಷಕರನ್ನು ಕೊಡುವಲ್ಲಿಯವರೆಗೆ, ಇಲ್ಲಿರುವ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವವರೆಗೆ, ಮತ್ತು ಸಮಸ್ಯೆ ಬಗೆಹರಿಯುವವರೆಗೆ ತಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಹೇಳಿದ್ದರು. ಅದೇ ರೀತಿ ಎರಡನೇ ದಿನವಾದ ಇಂದೂ ಶಾಲೆಯಲ್ಲಿ ಶೂನ್ಯ ಹಾಜರಾತಿ ಇತ್ತು ಎಂದು ತಿಳಿದು ಬಂದಿದೆ.
ವರದಿ :- ಉಲ್ಲಾಸ್ ಕಜ್ಜೋಡಿ