ಬಿಟ್ ಕಾಯಿನ್ ಎಂದರೇನು?: ಕೊಳ್ಳುವ, ಮಾರುವ ಮತ್ತು ಹಣ ಸಂಗ್ರಹಿಸುವ ಸಾಧನವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಪ್ರಚಲಿತಕ್ಕೆ ಬಂದಿರುವುದರಿಂದ ವ್ಯವಹಾರದಲ್ಲಿ ಬಾರಿ ಹಗರಣ ನಡೆದು ಬಂದಿದೆ ಎಂದು ಸುದ್ದಿಯಾಗಿದೆ. ಇದನ್ನು ಗುಪ್ತಲಿಪಿ ಶಾಸ್ತ್ರ ಎಂಬ ತಂತ್ರಜ್ಞಾನದ ಮೂಲಕ ನಡೆಸಲಾಗುತ್ತದೆ. ಅಲ್ಲದೇ ಸದ್ಯದಲ್ಲಿರುವ ಅನೇಕ ವಿದ್ಯುನ್ಮಾನ ಹಂತಗಳಲ್ಲಿ ಬಿಟ್ ಕಾಯಿನ್ ಮೊದಲಿನ ಸ್ಥಾನದಲ್ಲಿ ಇದೆ ಎಂಬುದು ಸತ್ಯ. ಇದಲ್ಲದೆ ಲಿಟೆಕಾಯ್ನ್, ಪೀರ್ ಕಾಯಿನ್, ನೋವ ಕಾಯಿನ್ ಮುಂತಾದ ಅನೇಕ ವಿದ್ಯುನ್ಮಾನ ಹಣಗಳು ಚಲಾವಣೆಯಲ್ಲಿ ಇರುವುದು.
ಬಿಟ್ ಕಾಯಿನ್ ನ ಪರಿಚಯ: ಬಾಹ್ಯ ಪ್ರಪಂಚಕ್ಕೆ ಅಪರಿಚಿತನಾದ ಸಂತೋಷಿ ನಕಾಮೋಟೋ ಎಂಬುವನು 2009 ರಲ್ಲಿ ಇದನ್ನು ಕಂಡು ಹಿಡಿದನು ಎಂದು ಹೇಳಲಾಗುತ್ತಿದೆ. 2011ರ ಜನವರಿಯಂದು, ಅಮೇರಿಕಾದ ಡಾಲರ್ 1 ರಷ್ಟು ಬೆಲೆಯಿದ್ದ ಒಂದು ಬಿಟ್ ಕಾಯಿನಿನ ಬೆಲೆ, 2017ರ ಸಮಯಕ್ಕೆ ಡಾಲರ್ 18,000ಕ್ಕೇರಿ, ವಿಶ್ವದೆಲ್ಲರ ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ. ಆದರ ಬೆಲೆ ಈಗ ಸುಮಾರು ಡಾ. 25000 ದಷ್ಟಿದೆ ಅಂದರೆ ಭಾರತದ 52 ಲಕ್ಷದಷ್ಟಿದೆ ಎನ್ನಬಹುದು ಎಂಬುದು ಆಶ್ಚರ್ಯಕರ ವಿಷಯವಾಗಿದೆ. ಸಾವಿರಾರು ವರ್ಷಗಳ ಹಿಂದೆ ಕವಡೆಯನ್ನು ಹಣವೆಂದು ಹೇಳುತ್ತಿದ್ದರು ಹಾಗೆಯೇ ಕವಡೆಗಳನ್ನು ಗಳಿಸಲು ಸರಕುಗಳ ಮಾರಾಟ ಮಾಡಿ ಕವಡೆ ಪಡೆಯುತ್ತಿದ್ದರು. ಹಾಗಾಗಿ ಅಂದಿನ ದಿನಗಳಲ್ಲಿ ವಿದ್ಯುನ್ಮಾನದಂತೆ ಕವಡೆಯ ಗಣಿಗಾರಿಕೆ ಎನಿಸಿಕೊಳ್ಳುತ್ತಿತ್ತು.
ಅಂದು ಕಂಪ್ಯೂಟರ್ ಗಳಲ್ಲಿ ಒಗಟುಗಳು ಆಟ, ವೀಡಿಯೋಗಳನ್ನು ನೋಡಿ ಆನಂದಿಸುತ್ತಿದ್ದರು. ಆದರೆ ಇತ್ತಿಚೆಗೆ ಕಂಪ್ಯೂಟರ್ ಯುಗ ಬದಲಾಗಿದ್ದು ಬಿಟ್ ಕಾಯಿನ್ ನಂತಹ ವಿದ್ಯುನ್ಮಾನ ಹಣದ ಪ್ರವರ್ತಕರು, ಗುಪ್ತಲಿಪಿ, ಶಾಸ್ತ್ರ ತಂತ್ರಜ್ಞಾನವನ್ನು ಬಳಸಿ ಅತ್ಯಂತ ಕ್ಲಿಷ್ಟ ಒಗಟುಗಳನ್ನು ಪರಿಹರಿಸಿ ಬರುವಂತಹ ಅಂಕಗಳಿಗೆ ಈಗ ವಿದ್ಯುನ್ಮಾನ ಹಣ ಎಂಬ ಮಾನ್ಯತೆ ದೊರೆತು, ವಿನಿಮಯದ ಮಾದ್ಯಮವಾಗಿ ಬೆಳೆದು ನಿಂತಿದೆ. ಇವಾಗ ಅದು ಬ್ಲಾಕ್ ಚೈನ್ ಎಂಬ ವಿನ್ಯಾಸದಲ್ಲಿದ್ದು ಈ ರೀತಿಯ ಶೋಧನೆಯನ್ನು ವಿದ್ಯುನ್ಮಾನ ಹಣದ ಗಣಿಗಾರಿಕೆ ಎನ್ನುತ್ತಾರೆ.
ಬಿಟ್ ಕಾಯಿನಿನ ಬ್ಲಾಕ್ ಚೈನಿನಲ್ಲಿ 21 ದರ ಲಕ್ಷ ಬಿಟ್ ಕಾಯಿನ್ ಗಳಿದ್ದು, ಅವುಗಳು ಪೈಕಿ ಸುಮಾರು 17 ದೇಶ ಲಕ್ಷ ಷಬಿಟ್ ಕಾಯಿನ್ ಗಳು ಮಾತ್ರ ಶೋದಕವಾಗಿದ್ದು ಗಣಿಗಾರಿಕೆ ಮುಂದುವರಿದಿದೆ. ವಿದ್ಯುನ್ಮಾನ ಹಣದ ಗಣಿಗಾರಿಕೆ ಕಷ್ಟದಾಯಕವಾಗಿದ್ದು ಆ ಪ್ರಕ್ರಿಯೆಗೆ ಅಪಾರವಾದ ಹಣ ಮತ್ತು ವಿದ್ಯುಚ್ಛಕ್ತಿಯ ವ್ಯಯವಾಗುವುದಂತೂ ಖಂಡಿತ. ಎಲ್ಲರಿಗೂ ವಿದ್ಯುನ್ಮಾನ ಹಣದ ಗಣಿಗಾರಿಕೆ ಮಾಡಲು ಅಸಾಧ್ಯ.
ಅದರಂತೆಯೇ ಬ್ಲಾಕ್ ಚೈನ್ ವಿದ್ಯುನ್ಮಾನ ಹಣದ ಇನ್ನೊಂದು ರೂಪವಾಗಿದ್ದು ನಾಣ್ಯದ ಅಥವಾ ನೋಟಿಸ್ ರೂಪದಲ್ಲಿ ಇರುವುದಿಲ್ಲ ಇ ವೆಲೆಟ್ ದಿಲ್ಲಿ ವಿದ್ಯುನ್ಮಾನ ರೂಪದಲ್ಲಿರುತ್ತದೆ. ಇಲ್ಲಿ ಹಣವನ್ನು ಹೊಂದಿರುವುದರ ವಿವರಗಳ ದಾಖಲೆ ಗುಪ್ತವಾಗಿರುತ್ತದೆ. ಇದನ್ನು ಹೊಂದಿರುವವರ ಹೆಸರುಗಳು ಯಾರಿಗೂ ತಿಳಿದಿರುವುದಿಲ್ಲ. ಇದರ ಬಳಕೆ ಅತ್ಯಂತ ಕ್ಲಿಷ್ಟವಾದ ಗುಪ್ತಪದದ ಬಳಕೆಯಿಂದ ಮಾತ್ರ ಸಾಧ್ಯ. ಇದರಿಂದ ಎಷ್ಟೋ ಜನರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ.
ವಿದ್ಯುನ್ಮಾನ ಹಣದ ನಿಯಂತ್ರಣ ಮಾಡಲು ಸಾಧ್ಯವೇ ಎಂಬುದಾದರೆ, ವಿದ್ಯುನ್ಮಾನ ಹಣದ ವಿಚಾರ ಪ್ರಪಂಚದ ಯಾವುದೇ ಸರಕಾರದ ನಿಯಂತ್ರಣಕ್ಕೂ ಒಳಪಟ್ಟಿಲ್ಲ. ಹಾಗಾಗಿ ಯಾವ ಸರಕಾರವೂ ವಿದ್ಯುನ್ಮಾನ ಹಣದ ಬೆಲೆಗೆ ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ! ಅದರ ಪ್ರವತಕರು ಮತ್ತು ದಾಖಲೆಗಳ ವಿವರಗಳೇ ನಿಗೂಢ. ವಿದ್ಯುನ್ಮಾನ ಹಣದ ದಾಖಲೆಗಳ ಜಾಲತಾಣವೇ ನೆಲಕ್ಕುರುಳಿದರೆ, ಹೂಡಿಕೆದಾರರು ಬಿದ್ದಂತೆಯೇ ಸರಿ. ಹಾಗೆಯೇ ಒಮ್ಮಲೇ ಬಲಿಷ್ಠ ಸರಕಾರಗಳು ಸೇರಿ ವಿದ್ಯುನ್ಮಾನ ಹಣದ ಮೇಲೆ ನಿಯಂತ್ರಣ ಸ್ಥಾಪಿಸವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಖದೀಮರಿಂದ ಲಪಟಾಯಿಸಲ್ಪಡುವ ಸಾಧ್ಯತೆಯೂ ಸೇರಿದಂತೆ, ವಿದ್ಯುನ್ಮಾನ ಹಣದ ವ್ಯವಹಾರದಲ್ಲಿ ಭಾರಿ ಅಪಾಯ ಅಡಗಿದೆ ಎಂಬುದು ನಮಗೆ ತಿಳಿದ ಸಂಗತಿ. ಆದರೂ ವಿದ್ಯುನ್ಮಾನ ಹಣದ ವ್ಯವಹಾರಗಳಿಗೆ, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವಾರು ಐರೋಪ್ಯ ರಾಷ್ಟ್ರಗಳೂ ಮಾನ್ಯತೆ ನೀಡಿವೆ. ಇತ್ತೀಚಿಗೆ ನಮ್ಮ ದೇಶ ಭಾರತದಲ್ಲೂ ವಿದ್ಯುನ್ಮಾನ ಹಣದ ವ್ಯವಹಾರ ಭಾರಿ ಪ್ರಮಾಣದಲ್ಲೇ ನಡೆಯುತ್ತಿದ್ದು, ಅದು ನಮ್ಮ ಸರಕಾರಕ್ಕೂ ತಿಳಿದಿದೆ.
ತಂತ್ರಜ್ಞಾನವೆಂಬುದು ದಿಢೀರನೆ ಭಾರಿ ಬದಲಾವಣೆ ಗಳನ್ನು ತರಬಹುದು. ‘ಇ-ಮೇಲ್ ತಂತ್ರಜ್ಞಾನವು ಪೋಸ್ಟ್ ಆಫೀಸಗಳನ್ನು ಅನಗತ್ಯಗೊಳಿಸಿದಂತೆ, ವಿದ್ಯುನ್ಮಾನ ಹಣವೆಂಬುದು ಬ್ಯಾಂಕ್ ಳನ್ನು ಮುಂದೆ ಅನಗತ್ಯಗೊಳಿಸಬಹುದು’ ಎಂಬುದು ತಂತ್ರಜ್ಞಾನಿಯರು ತಿಳಿಸಿದ್ದಾರೆ ಬದಲಾದ ಯುಗಕ್ಕೆ ಒಗ್ಗಿಕೊಂಡು ಮುನ್ನಡೆಯುವುದೇ ಜೀವನ. ವಿದ್ಯುನ್ಮಾನ ಹಣದ ಬಳಕೆ ನಿಯಂತ್ರಣದ ಹಾಗು ಕಾನೂನಿನ ಚೌಕಟ್ಟುಗಳಿಗೆ ಒಳಪಡಲಿ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಎಲ್ಲರು ಮುಂದಿಡುತ್ತಾ ಸಾಗುವಂತಾಗಲಿ.