ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೇವಾ ಸದನದಲ್ಲಿ ಏರ್ಪಡಿಸಿದ್ದು, ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಲಯನ್ ವೀರಪ್ಪ ಗೌಡ ಕಣ್ಕಲ್ ಅವರು ಮಾಹಿತಿ ನೀಡಿದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಆ ಮೂಲಕ ಕೃಷಿಯನ್ನು ಉದ್ಯಮವನ್ನಾಗಿಸಿ ಕೃಷಿಕರ ಆದಾಯವನ್ನು ಹೆಚ್ಚಿಸುವುದರಿಂದ ಸುಳ್ಯದಲ್ಲಿ ನೂತನವಾಗಿ ಸುಳ್ಯ ರೈತ ಉತ್ಪಾದನಾ ಸಂಸ್ಥೆ ರಚನೆಗೊಂಡಿದೆ.
ಸುಳ್ಯ ಹೋಬಳಿ ಮಟ್ಟದ 18 ಗ್ರಾಮಗಳನ್ನೊಳಗೊಂಡ ಈ ಸಂಸ್ಥೆ ಸ್ಥಾಪನೆಗೊಂಡಿದ್ದು ಶೀಘ್ರದಲ್ಲಿ ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಕಛೇರಿ ಆರಂಭಗೊಳ್ಳಲಿದೆ. ಈಗಾಗಲೇ 42 ಆಸಕ್ತ ರೈತ ಸಂಸ್ಥೆಗಳ ಮೂಲಕ 1000 ಸದಸ್ಯರುಗಳು ನೋಂದಾಯಿಸಿಕೊಂಡಿರುತ್ತಾರೆ15 ಜನ ನಿರ್ದೇಶಕರ ಆಡಳಿತ ಮಂಡಳಿ ರಚನೆಯಾಗಿರುತ್ತದೆ.
ರೈತರಿಗೆ ತಾಂತ್ರಿಕ ಸಲಹೆ, ಉತ್ತಮ ಗುಣಮಟ್ಟದ ಬೀಜ ಮತ್ತು ಸಸಿಗಳನ್ನು ಕಡಿಮೆ ದರದಲ್ಲಿ ಗೊಬ್ಬರ ಹಾಗೂ ಬಾಡಿಗೆ ಆಧಾರದಲ್ಲಿ ಯಂತ್ರೋಪಕರಣಗಳನ್ನು ಒದಗಿಸುವುದು ಮತ್ತು ರೈತರ ಉತ್ಪನ್ನಗಳನ್ನು ಖರೀದಿಸಿ ಸಂಸ್ಕರಿಸಿ ಮಾರಾಟ ಮಾಡುವ ಉದ್ದೇಶವನ್ನು ಹೊಂದಿರುತ್ತದೆ. ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಲಯನ್ ಅಧ್ಯಕ್ಷರಾದ ಆನಂದ ಪೂಜಾರಿಯವರು ವಹಿಸಿದ್ದರು. ಕಾರ್ಯದರ್ಶಿ ರಮಿತಾ ಜಯರಾಮ್ ಮತ್ತು ಖಜಾಂಜಿ ರಾಮಚಂದ್ರ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
- Thursday
- November 21st, 2024