ಮೇ 7ರಂದು ಕೇರಳದ ಕೊಲ್ಲಂ ಪಟ್ಟಣದಲ್ಲಿ ಹಾವಿನ ಕಡಿತಕ್ಕೊಳಗಾಗಿ ಮರಣ ಹೊಂದಿದ ಉತ್ತರ ಎಂಬ ಮಹಿಳೆಯ ಮರಣವು ಕೊಲೆ ಎಂಬ ಮಾಹಿತಿ ಲಭ್ಯ. ಕೇರಳ ಪೊಲೀಸ್ ತನಿಖೆಯಿಂದ ತಿಳಿದುಬಂದ ಸಂಗತಿ.
ಘಟನೆಯ ವಿವರ ಕೇರಳದ ಕೊಲ್ಲಂ ನಿವಾಸಿ ಸೂರಜ್ ಹಾಗೂ ಉತ್ತರ ಎಂಬ ದಂಪತಿಗಳಲ್ಲಿ ಮೇ 7ರಂದು ಪತ್ನಿ ಉತ್ತರ ಹಾವಿನ ಕಡಿತಕ್ಕೆ ಒಳಗಾಗಿ ಮರಣ ಹೊಂದಿದ ವಿಷಯವು ಕೇರಳದಾದ್ಯಂತ ಸಂಚಲನ ಮೂಡಿಸಿತ್ತು. ಕಾರಣ ಇದಕ್ಕೂ ಮೊದಲು ಎರಡು ತಿಂಗಳ ಮುನ್ನ ಇದೇ ಮಹಿಳೆಗೆ ಇದೇ ರೀತಿಯ ಹಾವಿನ ಕಡಿತಕ್ಕೊಳಗಾಗಿ ಅದೃಷ್ಟವಶಾತ್ ಚಿಕಿತ್ಸೆಯ ಫಲಕಾರಿಯಾದ ಹಿನ್ನೆಲೆ ಜೀವಿಸಿ ಬಂದಿದ್ದರು. ನಂತರ ಎರಡು ತಿಂಗಳು ಕಳೆದು ತಮ್ಮ ಮನೆಯಲ್ಲಿ ಉತ್ತರ ರವರು ರಾತ್ರಿ ನಿದ್ರಿಸುವ ಸಮಯದಲ್ಲಿ ಮತ್ತೊಮ್ಮೆ ವಿಷಪೂರಿತ ಹಾವಿನ ಕಡಿತಕ್ಕೆ ಒಳಗಾಗಿ ಈ ಬಾರಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಿರಂತರ ಹಾವಿನ ಕಡಿತಕ್ಕೊಳಗಾಗಿ ತ್ತಿರುವ ಮಹಿಳೆಯ ಬಗ್ಗೆ ಕೊಲ್ಲಂ ಹಾಗೂ ಕೇರಳದ ವಿವಿಧ ಭಾಗಗಳಲ್ಲಿ ಹಲವಾರು ರೀತಿಯ ಮಾತುಗಳು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಕೊನೆಗೂ ಕೇರಳ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಆಕಸ್ಮಿಕ ಮರಣವು ಕೊಲೆಯಾಗಿ ಮಾರ್ಪಾಡಾಗಿದೆ. ಕೊಲೆಯ ಆರೋಪಿ ಸೂರಜ್ ಎಂಬುವ ರಾಗಿದ್ದು ಆಸ್ತಿ ಗೆ ಸಂಬಂಧಿಸಿದಂತೆ ಈ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಾನು ತಪ್ಪು ಒಪ್ಪಿಕೊಂಡಿರುತ್ತಾರೆ ಎಂದು ತಿಳಿದುಬಂದಿದೆ. ಅದಲ್ಲದೆ ತಾನು ಪತ್ನಿಯನ್ನು ಕೊಲ್ಲಲು ಪದೇಪದೇ ಅವುಗಳನ್ನು ಒಂದೇ ವ್ಯಕ್ತಿಯಿಂದ ಪಡೆಯುತ್ತಿದ್ದು ಈ ಕೊಲೆಗೆ ಆ ವ್ಯಕ್ತಿ ಮತ್ತು ಸಹಕರಿಸಿದ ಮತ್ತೋರ್ವ ಸೇರಿ ಮೂವರನ್ನು ಪೊಲೀಸರು ತನಿಖೆಗೆ ಒಳಪಡಿಸಿರುತ್ತಾರೆ. ಹಾವು ಕಚ್ಚುವ ಸಂದರ್ಭದಲ್ಲಿ ಕಿರುಚಾಟ ದಿರಲು ಉತ್ತರಳ್ಳಿ ಗೆ ಪ್ರಜ್ಞೆ ತಪ್ಪುವ ಚುಚ್ಚುಮದ್ದನ್ನು ಬಳಸಲಾಗಿತ್ತು ಎಂದು ಕೂಡ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ .ಉತ್ತರಗಳ ತಂದೆ-ತಾಯಂದಿರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಈ ಒಂದು ಕೊಲೆಪಾತಕಿ ಗಳನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಅಲ್ಲದೆ ನಿರಂತರ ಹಾವಿನ ಕಡಿತಕ್ಕೆ ಒಳಗಾಗುತ್ತಿರುವುದು ಪೊಲೀಸರಿಗೆ ಶಂಕೆಯನ್ನು ಮೂಡಿಸಿತ್ತು. ಮನೆಯ ಒಂದೇ ಕೊಠಡಿಯಲ್ಲಿ ಉತ್ತರ ಮತ್ತು ಸೂರಜ್ ರವರು ನಿದ್ರಿಸುತ್ತಿರುವಾಗ ಕಿಟಕಿ ಬದಿಯಲ್ಲಿದ್ದ ಸೂರಜ್ ರವರ ಮಂಚವನ್ನು ಬಿಟ್ಟು ಉತ್ತರರ ಮಂಚಕ್ಕೆ ಬಂದು ಹಾವು ಕಚ್ಚಿರುವುದು ಪೊಲೀಸರ ಸಂಶಯಕ್ಕೆ ಇನ್ನೂ ಬಲ ನೀಡಿತ್ತು ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಕೊಲೆ ಮಾಡಲು ಈ ರೀತಿಯ ಕೊಲೆಗಡುಕರು ಯಾವ ವಸ್ತುಗಳ ಸಹಾಯವನ್ನು ಪಡೆಯುತ್ತಾರೆ ಎಂಬುವುದರಲ್ಲಿ ಯಾರಿಗೂ ಊಹಿಸಲು ಸಾಧ್ಯವಾಗುವುದಿಲ್ಲ.
ತನಿಖೆ ಇನ್ನೂ ಕೂಡ ಪ್ರಗತಿಯಲ್ಲಿದ್ದು ಕೊಲೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
- Saturday
- November 23rd, 2024