
ದೇವಚಳ್ಳ ಗ್ರಾಮದ ಕರಂಗಲ್ಲಿನ ದಿ.ಕೇಶವ ಗೌಡರ ಪುತ್ರ ಪ್ರಕಾಶ್ ಎಂಬುವವರು ನ.05 ರಂದು ರಾತ್ರಿ ತನ್ನ ಗೆಳೆಯನೊಂದಿಗೆ ಮಾಡಬಾಕಿಲು ಭಾಗದ ನದಿಗೆ ಬ್ಯಾಟರಿ ಬಳಸಿ ಮೀನು ಹಿಡಿಯಲು ತೆರಳಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತರಿಗೆ 37 ವರ್ಷ ವಯಸ್ಸಾಗಿದ್ದು, ತಾಯಿ ಭುವನೇಶ್ವರಿ, ಪತ್ನಿ ದಿವ್ಯಾ, ಪುತ್ರಿ ಹಿತಾಶ್ರೀ, ಸಹೋದರ ತೇಜ ಕುಮಾರ್, ಸಹೋದರಿ ಶ್ರೀಮತಿ ಸಂದ್ಯಾ ಹಾಗೂ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ. ಸ್ಥಳಕ್ಕೆ ಸುಬ್ರಹ್ಮಣ್ಯ ಎಸ್.ಐ ಜಂಬೂರಾಜ್ ಮಹಾಜನ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವರದಿ :- ಉಲ್ಲಾಸ್ ಕಜ್ಜೋಡಿ