ಕಲಾಮಾಯೆ ಸಂಸ್ಥೆಯಿಂದ ಹೊರತರಲಾದ ‘ಗೂಡೆ ಉಕ್ಕುಡಲಿ’ ಅರೆಭಾಷೆ ಕಿರುಚಿತ್ರ ಇಂದು ಬಿಡುಗಡೆಗೊಂಡಿತು. ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಹಾಗೂ ಅಮರ ಸುದ್ದಿ ಪತ್ರಿಕೆಯ ಸಂಪಾದಕ ಮುರಳೀಧರ ಅಡ್ಡನಪಾರೆ ಬಿಡುಗಡೆಗೊಳಿಸಿದರು.
ಚಿದಾನಂದ ಪರಪ್ಪ ಅವರ ಕಥೆ, ಚಿತ್ರ ಕಥೆ, ನಿರ್ದೇಶನವಿರುವ ಈ ಕಿರುಚಿತ್ರಕ್ಕೆ ಕಲಾಮಾಯೆಯ ಸುಧೀರ್ ಏನೆಕಲ್ ಸಂಭಾಷಣೆ, ಸಾಹಿತ್ಯ ಹಾಗೂ ಕಲಾನಿರ್ದೇಶನ ನೀಡಿದ್ದಾರೆ. ರಮೇಶ್ ಮೆಟ್ಟಿನಡ್ಕ ಅವರ ಗಾಯನವಿದ್ದು, ಪುಷ್ಪರಾಜ್ ಏನೆಕಲ್ ಮತ್ತು ನವೀನ್ ನೆಕ್ಕಿಲ ಛಾಯಾಗ್ರಹಣ ಮಾಡಿದ್ದಾರೆ. ಜೀವನ್ ಕೆರೆಮೂಲೆ ಸಂಕಲನ ಮತ್ತು ಸಂಗೀತ ನೀಡಿದ್ದಾರೆ. ಬಾಸ್ ಮೀಡಿಯಾ ಮಂಗಳೂರು ಇವರು ಪ್ರಚಾರ ಕಲೆ ನೀಡಿದ್ದು, ಅಭಿ ಸೌಂಡ್ಸ್ ಏನೆಕಲ್ ಹಾಗೂ ಚಂದ್ರ ಸೌಂಡ್ಸ್ ಪಂಜ ಸಹಕಾರ ನೀಡಿದ್ದಾರೆ. ನಿರ್ವಹಣೆ ಶ್ರೀಮತಿ ರಾಧಿಕಾ ಪ್ರೀತಮ್ ಏನೆಕಲ್ ಮಾಡಿದ್ದಾರೆ. ಸುಶ್ಮಿತಾ ಮೋಹನ್ ಬೆಳ್ಳಿಪ್ಪಾಡಿ, ಮಮತಾ ಕಲ್ಮಕಾರು, ಪ್ರಸಾದ್ ಕಾಟೂರು, ಶ್ರುತಿ ಮೆದು, ಸುಜಿತ್ ಕಾಯರ, ಜೀವನ್ ಕೆರೆಮೂಲೆ, ಪ್ರತೀಕ್ಷಾ ಮುರೂರು, ಮಿಥುನ್ ಕುಮಾರ್ ಸೋನ, ವಿಜಯಕುಮಾರ್ ದೇಂಗೋಡಿ, ರಾಮಚಂದ್ರ ಸುಬ್ರಹ್ಮಣ್ಯ, ಪುಷ್ಪರಾಜ್ ಏನೆಕಲ್, ಸಿಂಚನ ಗೌಡ ಪಾಂಬಾರು, ಪೂಜಾ ಪಂಜ, ಅಭಿಜ್ಞಾ ಪೂಜಾರಿ ಕೊಳ್ತಿಗೆ, ನಿಕೇಶ್ ಉಬರಡ್ಕ ಕಿರುಚಿತ್ರದಲ್ಲಿ ನಟಿಸಿದ್ದಾರೆ.
- Tuesday
- December 3rd, 2024