ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಬ್ರಹ್ಮಣ್ಯ, ಶ್ರೀ ಪಯಸ್ವಿನಿ ಸಾವಯವ ಕೃಷಿ ಪರಿವಾರ (ರಿ.) ಸುಳ್ಯ, ಐನೆಕಿದು ಹಾಲು ಉತ್ಪಾದಕರ ಸಂಘ, ನಿಸರ್ಗ ಯುವಕ ಮಂಡಲ (ರಿ.) ಐನೆಕಿದು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐನೆಕಿದು ಇವುಗಳ ಜಂಟಿ ಸಹಯೋಗದಲ್ಲಿ ಭೂಮಿ ಸುಪೋಷಣೆ ಹಾಗೂ ಸಂರಕ್ಷಣೆಗೋಸ್ಕರ ಪೂಜಾ ಕಾರ್ಯಕ್ರಮವು ಶ್ರೀ ಪಯಸ್ವಿನಿ ಸಾವಯವ ಕೃಷಿ ಪರಿವಾರ (ರಿ.) ಸುಳ್ಯ ಇದರ ಅದ್ಯಕ್ಷರಾದ ಶ್ರೀ ಪರಮೇಶ್ವರ ಮನೋಳಿತ್ತಾಯರ ನೇತೃತ್ವದಲ್ಲಿ ನವೆಂಬರ್ 02 ರಂದು ಪೂರ್ವಾಹ್ನ 10:00 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐನೆಕಿದು ಇಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಗೋ ಪೂಜೆಯನ್ನು ಎಲ್ಲರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರೂ ತಮ್ಮ ತಮ್ಮ ಜಮೀನಿನಿಂದ ತಂದಿರುವ ಹಿಡಿ ಮಣ್ಣನ್ನು ಪೂಜಾ ಸ್ಥಳದಲ್ಲಿ ಒಟ್ಟುಗೂಡಿಸಿ ಭೂಮಿ ಪೂಜೆ ಮಾಡಿದ ನಂತರ ಶ್ರೀ ಹೇಮಂತ್ ಕಂದಡ್ಕ ಅವರಿಂದ ಮಾಹಿತಿ ಕಾರ್ಯಕ್ರಮ ಹಾಗೂ ಸೇರಿದವರೆಲ್ಲರಿಗೂ ಸಂಕಲ್ಪ ಭೋದನೆಯನ್ನು ಮಾಡಿಸಲಾಯಿತು. ಪೂಜೆ ಮಾಡಿದ ಮಣ್ಣನ್ನು ಪ್ರಸಾದ ರೂಪದಲ್ಲಿ ಅವರವರ ಭೂಮಿಗೆ ಸೇರಿಸಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಐನೆಕಿದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಹಾಗೂ ಸರ್ವಸದಸ್ಯರು, ಶ್ರೀ ಪಯಸ್ವಿನಿ ಸಾವಯವ ಕೃಷಿ ಪರಿವಾರ ಸುಳ್ಯ ಇದರ ಅದ್ಯಕ್ಷರಾದ ಶ್ರೀ ಪರಮೇಶ್ವರ ಮನೋಳಿತ್ತಾಯ, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ನಿರ್ದೇಶಕರಾದ ಕಿರಣ್ ಪೈಲಾಜೆ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕೂಜುಗೋಡು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐನೆಕಿದು ಇದರ ಎಸ್.ಡಿ.ಎಂ.ಸಿ ಅದ್ಯಕ್ಷರಾದ ಜಯರಾಮ್ ಕಟ್ರಮನೆ ಹಾಗೂ ಸರ್ವಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಲಲಿತಾ ಗುಂಡಡ್ಕ ಹಾಗೂ ಸದಸ್ಯರಾದ ಭಾರತಿ ಮೂಕಮಲೆ, ಗಿರೀಶ್ ಆಚಾರ್ಯ ಪೈಲಾಜೆ, ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ನವೀನ್ ಕಟ್ರಮನೆ, ಭವಾನಿಶಂಕರ ಪೈಲಾಜೆ, ನಿಸರ್ಗ ಯುವಕ ಮಂಡಲ ಐನೆಕಿದು ಇದರ ಅದ್ಯಕ್ಷರಾದ ಲಕ್ಷ್ಮೀಶ ಇಜ್ಜಿನಡ್ಕ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಶ್ರೀ ಕಿಶೋರ್ ಕುಮಾರ್ ಕೂಜುಗೋಡು ಸ್ವಾಗತಿಸಿ, ಲಕ್ಷ್ಮೀಶ ಇಜ್ಜಿನಡ್ಕ ಧನ್ಯವಾದ ಸಮರ್ಪಿಸಿದರು. ಭುಕ್ಷಿತ್ ನೀರ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ