ಐವರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ. ಯನ್ನು ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ ಇವರ ಅಧ್ಯಕ್ಷತೆಯಲ್ಲಿ ಸೆ.23 ರಂದು ರಚಿಸಲಾಯಿತು. ಐವರ್ನಾಡು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಸದಸ್ಯರಾದ ಯೋಗಿಶ ಕಲ್ಲಗದ್ದೆ, ಮಮತಾ ಉದ್ದಂಪಾಡಿ, ಎಸ್ಡಿಎಂಸಿ ಪೂರ್ವಾಧ್ಯಕ್ಷರಾದ ನಾಗಪ್ಪ ಗೌಡ ಪಾಲೆಪ್ಪಾಡಿ, ಬೆಳ್ಳಾರೆ ವೃತ್ತದ ಶಿಕ್ಷಣ ಸಂಯೋಜಕರಾದ ವಸಂತ ಏನೆಕಲ್, ಸಿ.ಆರ್.ಪಿ ಶ್ರೀಮತಿ ವಾಣಿ ಪಿ ಬಿ , ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಾವತಿ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ.ಯ ನೂತನ ಅಧ್ಯಕ್ಷರಾಗಿ ನವೀನ ಕುಮಾರ್ ಅರಳಿಕಟ್ಟೆ, ಉಪಾಧ್ಯಕ್ಷರಾಗಿ ಶ್ರೀಮತಿ ರಾಜೀವಿ ಉದ್ದಂಪಾಡಿ, ಸದಸ್ಯರಾಗಿ ಶ್ವೇತಾ ನನ್ಯಡ್ಕ ರುಕ್ಮಯ್ಯ ಕೊಯಿಲ, ಕುಸುಮಾ ನನ್ಯಡ್ಕ, ಚಿದಾನಂದ ಉದ್ದಂಪಾಡಿ ಪುಷ್ಪ ಶಾಂತಿಮೂಲೆ, ವಿ.ಕೆ.ಖಲಂದರ್ ಶರೀಫ್ ಐವರ್ನಾಡು, ಶಫಿಯಾ ಪಾಲೆಪ್ಪಾಡಿ, ದಿನೇಶ ಕತ್ಲಡ್ಕ, ಜಯಂತ ನಾಟಿಕೇರಿ, ರಾಮಚಂದ್ರ ಕಟ್ಟತ್ತಾರು, ಲೋಕೇಶ ಪವಿತ್ರಮಜಲು, ವಿಮಲಾ ಕುತ್ಯಾಡಿ, ಮನೋರಮಾ ಕೈಯೋಲ್ತಡ್ಕ, ಕವಿತಾ ಶಾಂತಿಮೂಲೆ,ಮೀನಾಕ್ಷಿ ನಿಡುಬೆ ಇವರನ್ನು ಆಯ್ಕೆ ಮಾಡಲಾಯಿತು.
ಪದನಿಮಿತ್ತ ಸದಸ್ಯರಾಗಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಾವತಿ, ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಗಂಗೆ , ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಿವಶಾಂತಿ ಹಾಗೂ ನಾಮ ನಿರ್ದೇಶಕ ಸದಸ್ಯರಾಗಿ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಕಲ್ಲಗದ್ದೆ, ಸಹಶಿಕ್ಷಕಿ ಶ್ರೀಮತಿ ನಳಿನಾಕ್ಷಿ, ವಿದ್ಯಾರ್ಥಿ ನಾಯಕಿ ಮಾನ್ವಿತಾ ಬಿ.ಎಂ ಆಯ್ಕೆಯಾದರು.
- Sunday
- November 24th, 2024