ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸೆ.23 ರಂದು ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರವೀಂದ್ರ ಕುಮಾರ್ ರುದ್ರಪಾದ ಅವರ ಅಧ್ಯಕ್ಷತೆಯಲ್ಲಿ ಅಭ್ಯಾಸ ವರ್ಗ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಸನ್ನ ಕುಮಾರ್ ದರ್ಬೆ ಕಾರ್ಯಕ್ರಮ ಉದ್ಘಾಟಿಸಿದರು.
ಈ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವದಲ್ಲಿ ಪರಿಣಾಮಕಾರಿ ನಾಯಕತ್ವದ ಕುರಿತು ಸವಿತಾ ಮುಡೂರು ಮಾಹಿತಿ ನೀಡಿದರು ಹಾಗೂ ವಂದೇ ಮಾತರಂ ಅಭ್ಯಾಸ ಗೀತೆ ಕುರಿತು ಸುಭಾಷಿಣಿ ಅವರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕೃಷಿ ಮತ್ತು ತಾಂತ್ರಿಕ ಉದ್ಯೋಗದ ಮಹತ್ವ, ಸ್ಮಾರ್ಟ್ ಸಿಟಿ-ಸ್ಮಾರ್ಟ್ ವಿಲೇಜ್ ಯೋಜನೆಯ ಬಗ್ಗೆ ಹಾಗೂ ನಮ್ಮ ಬದುಕು-ನಮ್ಮ ಹಕ್ಕು ಎಂಬ ವಿಚಾರಗಳ ಬಗ್ಗೆ ಸಂವಾದ ನಡೆಸಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ವನಜಾ.ವಿ ಭಟ್ ಹಾಗೂ ಶಿಭಿರಾಧಿಕಾರಿ ಲತಾ ಸರ್ವೇಶ್ವರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಯಪ್ರಕಾಶ್ ಕೂಜುಗೋಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕಲ್ಮಡಿ ವಂದಿಸಿದರು. ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಹಾಗೂ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಮಹಿಳಾ ಸಂಚಾಲಕಿ ಸೌಜನ್ಯ ಭಟ್ ಕುಕ್ಕೆ, ಚಂದ್ರಶೇಖರ ಕೋನಡ್ಕ, ವರದರಾಜ್ ಸಂಕೇಶ್, ಅಚ್ಯುತ ಗೌಡ, ದೀಕ್ಷಿತ್ ಐತ್ತೂರು, ಹರೀಶ್.ಕೆ.ಎಸ್, ವಾರಿಜಾ ಭಟ್, ಸುಭಾಷಿಣಿ ಮಾನಾಡು, ಶೇಖರಪ್ಪ ತಳವಾರ, ಯಶವಂತ್ ಬಂಟ್ವಾಳ, ಮೋನಪ್ಪ ಮಾನಾಡು, ಮನೋಜ್.ಎಸ್, ಬಂಕ್ಷಿತ್.ಎಂ.ಎನ್ ಮುಂತಾದವರು ಉಪಸ್ಥಿತರಿದ್ದರು.
(ವರದಿ :- ಉಲ್ಲಾಸ್ ಕಜ್ಜೋಡಿ)