Ad Widget

ಸುಳ್ಯ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 105ನೇ ಜನ್ಮದಿನಾಚರಣೆ

ರಾಷ್ಟ್ರೀಯವಾದಿ ಚಿಂತಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ 105ನೇ ಜನ್ಮ ಜಯಂತಿ ಆಚರಣೆ ಇಂದು ಸುಳ್ಯ ದ ಬಿ.ಜೆ.ಪಿ ಕಛೇರಿಯಲ್ಲಿ ನಡೆಯಿತು. ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು. ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಮಾತನಾಡಿ ಪಂಡಿತ್ ದೀನ್ ದಯಾಳ್ ಉಪಧ್ಯಾಯರವರು ಕಷ್ಟದ ದಿನಗಳಲ್ಲಿ ಪಕ್ಷ ಸಂಘಟನೆಯ ಬಗ್ಗೆ ಮಾಡಿದ ತ್ಯಾಗ ಸೇವೆಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.‌

. . . . . . . . .

ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಎ. ವಿ. ತೀರ್ಥರಾಮ, ಜಿಲ್ಲಾ ಯುವಮೋರ್ಚ ದ ಅಧ್ಯಕ್ಷ ಗುರುದತ್ ನಾಯಕ್, ಮಂಡಲ ಬಿಜೆಪಿ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಐ.ಬಿ. ಚಂದ್ರಶೇಖರ್, ಜಿಲ್ಲಾ ಬಿಜೆಪಿ ಸದಸ್ಯರರಾದ ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ನಗರ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ರಾದ ಬುದ್ಧ ನಾಯ್ಕ್, ನಗರ ಪಂಚಾಯತ್ ಸದಸ್ಯರು ಗಳಾದ ಸುಧಾಕರ್, ಶೀಲ ಅರುಣ್ ಕುರುಂಜಿ, ಕಿಶೋರಿ ಶೇಟ್, ಶಶಿಕಲಾ ದುಗಲಡ್ಕ, ಶಿಲ್ಪಾ ಸುದೇವ್, ಬಾಲಕೃಷ್ಣ ರೈ, ಸಿ.ಎ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಬೂಡುಪನ್ನೆ, ಸಿಎ ಬ್ಯಾಂಕ್ ನ ನಿರ್ದೇಶಕ ರಾದ ನವೀನ್ ಕುದ್ಪಾಜೆ, ಬೂತ್ ಸಮಿತಿಯ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾದ ಚನಿಯ ಕಲ್ತಡ್ಕ, ಯುವಮೋರ್ಚದ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಬಿಜೆಪಿ ಮಂಡಲ ಸೋಶಿಯಲ್ ಮೀಡಿಯ ಇದರ ಸಹಸಂಚಾಲಕರಾದ ಸುಪ್ರೀತ್ ಮೋಂಟಡ್ಕ, ಮಂಡಲ ಕಾರ್ಯದರ್ಶಿ ಮೋಹಿನಿ ನಾಗರಾಜ್, ಜಾಲ್ಸೂರು ಗ್ರಾಮ ಪಂಚಾಯಿತ್ ನ ಮಾಜಿ ಅಧ್ಯಕ್ಷ ಅಶೋಕ್ ಅಡ್ಕಾರ್, ಜಯನಗರ ಬೂತ್ ಅಧ್ಯಕ್ಷ ರೋಹಿತ್ ಕೊಂಗೋಡಿ, ಚಂದ್ರಶೇಖರ್ ಕೇರ್ಪಳ, ದಯಾನಂದ ಕೇರ್ಪಳ, ಜಗದೀಶ್ ಸರಳಿಕುಂಜ, ದಾಮೋದರ ಮಂಚಿ, ಶೀನಪ್ಪ ಬಯಂಬು, ವಿಜಯ ಕಾಯರ್ತೋಡಿ, ಚಂದ್ರಶೇಖರ್ ಪೂಜಾರಿ ಭಾಗವಹಿಸಿದ್ದರು.
ಸೇವೆ ಮತ್ತು ಸಮರ್ಪಣೆ ಅಭಿಯಾನದ ಪ್ರತಿಜ್ಞಾವಿಧಿಯನ್ನು ಸುಭೋದ್ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಡಲ ವತಿಯಿಂದ ಪೋಸ್ಟ್ ಕಾರ್ಡ ಅಭಿಯಾನ ನಡೆಯಿತು.
ಈ ಕಾರ್ಯಕ್ರಮ ವನ್ನು ಐ.ಬಿ. ಚಂದ್ರಶೇಖರ್ ಸ್ವಾಗತಿಸಿ, ಜಿನ್ನಪ್ಪ ಪೂಜಾರಿ ವಂದಿಸಿದರು, ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading