Ad Widget

ಪ್ರತಿಭಟನಾ ನಿರತ ಅಸ್ಸಾಂ ಜನರ ಮೇಲೆ ಪೋಲಿಸರಿಂದ ಗುಂಡೇಟು, ದೌರ್ಜನ್ಯ ಖಂಡಿಸಿ ಬೆಳ್ಳಾರೆಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ

ಬೆಳ್ಳಾರೆ : ಪ್ರತಿಭಟನಾ ನಿರತ ಅಸ್ಸಾಂ ಜನರ ಮೇಲೆ ಪೋಲಿಸರಿಂದ ಗುಂಡೇಟು, ದೌರ್ಜನ್ಯ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವತಿಯಿಂದ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ನಿರತ ಅಸ್ಸಾಂ ನ ಗ್ರಾಮೀಣ ಜನರ ಮೇಲೆ ಸರ್ಕಾರಿ ಪ್ರಾಯೋಜಿತವಾಗಿ ಪೋಲಿಸರು ಗುಂಡೇಟು ನಡೆಸಿ ಮೂರು ಜನರನ್ನು ಬಲಿ ಪಡೆದು ಹಲವಾರು ಜನರನ್ನು ಗಾಯಗೊಳಿಸಿ ಕ್ರೂರ ವರ್ತನೆ ನಡೆಸಿದ ಕೃತ್ಯವು ಖಂಡನೀಯ ಇದರ ವಿರುದ್ದ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ ಎಂದು ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಹೇಳಿದರು. ಮೃತಪಟ್ಟ ಅಮಾಯಕ ಅಸ್ಸಾಂ ನಾಗರಿಕರ ಕುಟುಂಬ ಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

. . . . .

ಸುಳ್ಯ ವಿಧಾನಸಭಾ ಸಮಿತಿ ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ, ಬೆಳ್ಳಾರೆ ಬ್ಲಾಕ್ ಸಮಿತಿ ಅಧ್ಯಕ್ಷರಾದ ಹಮೀದ್ ಮರಕ್ಕಡ, ಕಾರ್ಯದರ್ಶಿ ಶಹೀದ್ ಬೆಳ್ಳಾರೆ, ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷರಾದ ಸಿದ್ದಿಕ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!