ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ದೇವಚಳ್ಳ ಗ್ರಂಥಾಲಯವು ಇಂದು ಡಿಜಿಟಲ್ ಗ್ರಂಥಾಲಯವಾಗಿ ನವೀಕೃತಗೊಂಡು ಉದ್ಘಾಟನೆಗೊಂಡಿತು.
ಶಿಕ್ಷಣ ಇಲಾಖೆಯ ಮಹತ್ವದ ಪರಿಕಲ್ಪನೆಯಡಿ ಕೇವಲ ಹದಿನೈದು ದಿನಗಳಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಂಥಾಲಯವು ಅತ್ಯಂತ ಸುವ್ಯವಸ್ತಿತವಾಗಿ ಡಿಜಿಟಲ್ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಅತ್ಯಾಕರ್ಷಕ ಗೋಡೆ ಬರಹ, ಸುಂದರ ಚಿತ್ರಗಳು, 10,000 ಕ್ಕೂ ಮಿಕ್ಕಿದ ಪುಸ್ತಕಗಳು ಸುಸಜ್ಜಿತ ವಾಚನಾಲಯಗಳಿಂದ ಕೂಡಿರುವ ಗ್ರಂಥಾಲಯಕ್ಕೆ ಇಂದು ಊರ ಓದುಗ ದಾನಿಗಳಿಂದ ಇಂದು ನೂರಕ್ಕೂ ಮಿಕ್ಕಿ ಪುಸ್ತಕಗಳು ಕೊಡುಗೆಯಾಗಿ ಬಂದಿವೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ನೀಡಿದರು. ಗ್ರಾಮ ಕಾರಣಿಕರಾದ ಮಧುಶ್ರೀನಿವಾಸ್ ಡಿಜಿಟಲ್ ಲಾಗಿನ್ ಗೆ ಚಾಲನೆ ನೀಡಿದರು. ದಿನೇಶ್ ಕೇರ, ಪ್ರೇಮಲತಾ ಮತ್ತು ರಮೇಶ್ ಪಡ್ಪು ಪುಸ್ತಕ ದಾನ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಧ್ಯಕ್ಷೆ ರಾಜೇಶ್ವರಿ ಮಣಿಕಂಠ, ಸದಸ್ಯರುಗಳಾದ ದುರ್ಗಾದಾಸ್ ಮೆತ್ತಡ್ಕ, ಶೈಲೇಶ್ ಅಂಬೆಕಲ್ಲು, ಪ್ರೇಮಲತಾ, ದಿನೇಶ್ ಕೇರ, ಪ್ರಶಾಂತ್, ರಮೇಶ್ ಪಡ್ಪು, ಲೀಲಾವತಿ ಸೇವಾಜೆ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ವಿಜಯ, ಪಿಡಿಓ ಗುರುಪ್ರಸಾದ್, ಗ್ರಾಮ ಪಂಚಾಯತ್ ಸಿಬ್ಬಂಧಿ ವರ್ಗ ಹಾಗೂ ಗ್ರಂಥಾಲಯ ಓದುಗರು ಉಪಸ್ಥಿತರಿದ್ದರು, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿರಾಮ್ ಕಣೆಮರಡ್ಕ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ ವಂದಿಸಿದರು.
- Saturday
- November 23rd, 2024