ಅಲ್-ಮದೀನಾ ಚಾರಿಟೇಬಲ್ ಟ್ರಸ್ಟ್ ಪೈಚಾರ್
ಕಳೆದ ಒಂದು ವರುಷಗಳಿಂದ ದಾನಿಗಳ ಸಹಕಾರದಿಂದ ನಿರಂತರವಾಗಿ ಅನಾಥ ಹಾಗೂ ನಿರ್ಗತಿಕ ಕುಟುಂಬಗಳಿಗೆ ತಿಂಗಳ ಸಂಪೂರ್ಣ ವೆಚ್ಚವನ್ನು ನೀಡುತ್ತಾ ಬರುತ್ತಿದ್ದುಅಲ್ಲದೇ ಇನ್ನಿತರ ಕಷ್ಟದ ಸಮಯದಲ್ಲಿ ಬಂದ ಅರ್ಜಿಗಳಿಗೆ ಶೀಘ್ರ ಸ್ಪಂದನೆ, ಬಡ ರೋಗಿಗಳ ಚಿಕಿತ್ಸೆಗೆ ನೆರವು, ವಿಧವೆಯರಿಗೆ ಸಹಾಯಸ್ತ ಮುಂತಾದ ಹತ್ತಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಹಾಮಾರಿಯಾಗಿ ಕೊರೋನ ವೈರಸ್ ಪಸರಿಸಿದ ಕಠಿಣ ಸಂದರ್ಭಗಳಲ್ಲಿ ಲಾಕ್-ಡೌನ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದ ತತ್ತರಿಸಿದ ಸ್ಥಳೀಯ ಜನತೆಗೆ , ದಿನೋಪಯೋಗಿ ವಸ್ತುವಿನಿಂದ ಹಿಡಿದು ನಾನಾ ರೀತಿಯಲ್ಲಿ ಸಹಕಾರವನ್ನು ನೀಡಿರುತ್ತಾರೆ.
ರಮಳಾನ್ ತಿಂಗಳು ಆಗಮನವಾದಾಗ ಆ ಸಂದರ್ಭದಲ್ಲಿ ವೃತಧಾರಿಗಳಿಗೆ ಇಫ್ತಾರ್ ಪದಾರ್ಥವನ್ನು ಮನೆ ಮನೆಗೆ ವಿತರಣೆ ನಡೆಸಿ ಜನರ ಪ್ರಶಂಸೆಗೆ ಪಾತ್ರವಾಗಿದೆ.
ಒಬ್ಬ ಮುಸ್ಲಿಮನ ಪಾಲಿಗೆ ಸಂತಸದ ದಿನವಾದ ಪೆರುನಾಳ್ ದಿವಸ ಅಂದು ನಮ್ಮ ಸಂತೋಷದೊಂದಿಗೆ ಬಡವರನ್ನೂ ಸಹಾ ಸಂತಸಗೊಳಿಸೋಣ ಎಂಬ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಶರಾದ ಅಶ್ರಫ್ ಅಚ್ಚು ನೇತ್ರತ್ವದಲ್ಲಿ ಈದ್ ಕಿಟ್ ವಿತರಣೆ ಮಾಡುವ ಮೂಲಕ ಸಹಕಾರಿ ಯಾಗಿದ್ದಾರೆ ಎಂದು ಸಂಘದ ಇತರ ಸದಸ್ಯರುಗಳು ಪ್ರಶಂಸನೀಯ ಮಾತನಾಡುತ್ತಿದ್ದಾರೆ. ಸುಮಾರು 800ರೂಪಾಯಿಯ ಬೆಲೆ ಬರುವ 80 ಈದ್ ಕಿಟ್ ವಿತರಿಸುವ ಸಂದರ್ಭದಲ್ಲಿ ಅಲ್-ಮದೀನಾ ಅಧ್ಯಕ್ಷರಾದ ಅಶ್ರಪ್ ಅಚ್ಚಪ್ಪು, ಆಬಿದ್ ಪೈಚಾರ್,ಕರೀಮ್ ಪೈಚಾರ್, ಸಾಲಿ ಕೆ.ಪಿ,ಹನೀಫ್ ಪಿ.ಕೆ ಮೊದಲಾದವರು ಉಪಸ್ಥಿತರಿದ್ದರು.
- Friday
- November 1st, 2024