ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಸುಮಾರು 36 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಆ. 31ರಂದು ಸ್ವಯಂ ನಿವೃತ್ತಿ ಪಡೆದ ಶ್ರೀಮತಿ ರಾಜೀವಿ ಎಂ.ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸೆ. 11ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಅಮರಪಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಮಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ವೈದ್ಯರಾದ ಡಾ. ಗೋಪಾಲಕೃಷ್ಣ ಪೈಲೂರು, ಮಾಜಿ ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮನಾಭ ಬೊಳ್ಳೂರು, ದೇವಚಳ್ಳ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಕುಮಾರ್, ಅಮರಪಡ್ನೂರು ಗ್ರಾ.ಪಂ. ಸದಸ್ಯರುಗಳಾದ ಕೃಷ್ಣಪ್ರಸಾದ್ ಮಾಡಬಾಗಿಲು, ದಿವಾಕರ ಪೈಲಾರು ಮತ್ತು ಶ್ರೀಮತಿ ರಾಜೀವಿಯವರ ಪತಿ ನಿವೃತ್ತ ಬಿ.ಎಸ್.ಎನ್.ಎಲ್. ಜೂನಿಯರ್ ಇಂಜಿನಿಯರ್ ಶಿವರಾಮ ಮಡಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಕೃಷ್ಣ ಭಟ್ ಎನ್ ಅಭಿನಂದನಾ ಮಾತುಗಳನ್ನಾಡಿದರು. ಎಸ್.ಡಿ.ಎಂ.ಸಿ. ನಿಕಟಪೂರ್ವಾಧ್ಯಕ್ಷ ರಾಘವ ಕುಕ್ಕುಜಡ್ಕ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗಣೇಶ್ ಪಿಲಿಕಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಯಶೋಧ, ಶ್ರೀಮತಿ ಭವ್ಯ, ಗಣೇಶ್ ಪಿಲಿಕಜೆ, ಗ್ರಾ.ಪಂ. ಸದಸ್ಯ ಜನಾರ್ಧನ, ಶಿಕ್ಷಕಿ ಶಶಿಕಲಾ ಬೊಳ್ಳೂರು, ಶಿಕ್ಷಕಿ ಹೇಮಲತಾ ಎಸ್, ಕುಕ್ಕುಜಡ್ಕ ಶಾಲಾ ಶಿಕ್ಷಕಿಯರಾದ ಶ್ರೀಮತಿ ಸುಲೋಚನ, ಶ್ರೀಮತಿ ಶ್ವೇತಾ, ಶ್ರೀಮತಿ ರಾಜೀವಿಯವರ ಪುತ್ರಿ ಡಾ. ಚೈತ್ರಾ ಮಡಪ್ಪಾಡಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ನಿವೃತ್ತರಿಗೆ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ಕೆ.ಕೆ. ಅಭಿನಂದನಾ ಪತ್ರ ವಾಚಿಸಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ 6 ವರ್ಷ ಸೇವೆ ಸಲ್ಲಿಸಿದ್ದ ಪೂರ್ವಾಧ್ಯಕ್ಷ ರಾಘವ ಕುಕ್ಕುಜಡ್ಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಸಭಾಧ್ಯಕ್ಷರು ವಿತರಿಸಿದರು. ನಿವೃತ್ತ ಶಿಕ್ಷಕಿ ಶ್ರೀಮತಿ ರಾಜೀವಿ ಎಂ. ಶಾಲಾ ಅಭಿವೃದ್ಧಿಗಾಗಿ ರೂ. 50 ಸಾವಿರ ಧನ ಸಹಾಯವನ್ನು ಈ ಸಂದರ್ಭದಲ್ಲಿ ನೀಡಿದರು. ಸಹಶಿಕ್ಷಕಿ ಶ್ರೀಮತಿ ರತ್ನಾವತಿ ವಂದಿಸಿದರು.