ಜೇಸಿಐ ಬೆಳ್ಳಾರೆ ಮತ್ತು ಯುವ ಜೇಸೀ ವಿಭಾಗ ಬೆಳ್ಳಾರೆ ಇದರ ಜೇಸೀ ಸಪ್ತಾಹ 2021 ಸಪ್ತ ಕಲೋತ್ಸವದ ಅಂಗವಾಗಿ ವಲಯಾಧ್ಯಕ್ಷರ ಭೇಟಿ ಸೆ.11 ರಂದು ನಡೆಯಿತು. ಬೆಳಿಗ್ಗೆ ಶಾಶ್ವತ ಯೋಜನೆಗಳ ಅನಾವರಣ ಕಾರ್ಯಕ್ರಮದ ಅಂಗವಾಗಿ ನೆಟ್ಟಾರು ಶಾಲೆಗೆ ನೀರಿನ ಟ್ಯಾಂಕ್ ಮತ್ತು ನಾಮಫಲಕವನ್ನು ಕೊಡುಗೆಯಾಗಿ ನೀಡಲಾಯಿತು.
ನಂತರ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಜೇಸಿಐ ಅಧ್ಯಕ್ಷ ಪದ್ಮನಾಭ ಕಲಾಸುಮ ವಹಿಸಿದ್ದರು. ಜೇಸೀ ಪೂರ್ವಾಧ್ಯಕ್ಷ ಹಾಗೂ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಕ್ಷಯ ಮುಕ್ತ ಭಾರತ 2025 ‘ಹೆಜ್ಜೆ ಬದಲಾದಾಗ’ ಕಿರುಚಿತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಬೆಳ್ಳಾರೆ ಜೇಸಿಐನ ಪೂರ್ವಾಧ್ಯಕ್ಷ ರವಿಕಿರಣ್ ಎಡಪತ್ಯ ರವರಿಗೆ ಕಮಲಪತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ ಗಳಿಗೆ ಗೌರವಾರ್ಪಣೆ ನಡೆಯಿತು. ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್. ಬಿ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಗ್ರಾಮೀಣ ಪ್ರತಿಭೆಗಳ ಕೂಡುವಿಕೆಯಲ್ಲಿ ‘ಹೆಜ್ಜೆ ಬದಲಾದಾಗ’ ಎಂಬ ಕಿರುಚಿತ್ರ ಮೂಡಿಬಂದಿದ್ದು ಇದರ ನಿರ್ದೇಶಕರಾದ ಕೃಷ್ಣಪ್ಪ ಬಂಬಿಲ ಹಾಗೂ ತಂಡದ ಸದಸ್ಯರಿಗೆ ಗೌರವಾರ್ಪಣೆ ನಡೆಯಿತು.
ವೇದಿಕೆಯಲ್ಲಿ ವಲಯ ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಪ್ರದೀಪ್, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ದೀಪಕ್ ಗಂಗೂಲಿ, ಜಿಲ್ಲಾ ಕ್ಷಯ ನಿಯಂತ್ರಣ ಕಚೇರಿಯ ಜಿಲ್ಲಾ ಮೇಲ್ವಿಚಾರಕ ಕಿಶೋರ್, ಜೇಸಿ ನಿಕಟ ಪೂರ್ವಾಧ್ಯಕ್ಷ ವೀರನಾಥ ಕಲ್ಲೋಣಿ, ಕಾರ್ಯದರ್ಶಿ ಜಗದೀಶ ರೈ ಪೆರುವಾಜೆ, ಯುವ ಜೇಸಿ ಅಧ್ಯಕ್ಷೆ ಕೆ.ಎಸ್.ಚಿರಶ್ರೀ , ಕಾರ್ಯದರ್ಶಿ ವರದಶಂಕರ ಕೆ, ಉಪಸ್ಥಿತರಿದ್ದರು.