Ad Widget

ಶರತ್ ನೀರ್ಕಜೆ ನಿರ್ದೇಶನದ ಕಿರುಚಿತ್ರ ಪೋಸ್ಟರ್ ಬಿಡುಗಡೆ

ಯುವಜನತೆ ಹೊಸತನ ತರುವಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಅದರಲ್ಲಂತೂ ಸಿನಿಮಾದ ಕಡೆ ಒಲವ ತೋರಿಸುವ ಕಲಾವಿದರೇ ಹೆಚ್ಚಾಗುತ್ತಿದ್ದಾರೆ. ಹೊಸ ಹೊಸ ಕಥೆಗಳು, ಆಲೋಚನೆಗಳು, ಭಾವನೆಗಳನ್ನು ಕಿರುಚಿತ್ರ, ಆಲ್ಬಮ್ ಸಾಂಗ್ ಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ನಮ್ಮ ಕರಾವಳಿ ಜನತೆ ಸೈ ಎನಿಸಿಕೊಂಡಿದ್ದಾರೆ. ಆದರೆ ಇಲ್ಲೊಂದು ಕಿರುಚಿತ್ರ ಪೋಸ್ಟರ್ ಬಿಡುಗಡೆಗೊಳ್ಳುವ ಮೊದಲೇ ಮನೆಮಾತಾಗಿದೆ.

ಶರತ್ ನೀಕ೯ಜೆ ನಿದೇ೯ಶನದ ಹೊಸ ಕಿರುಚಿತ್ರ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದ್ದು ಈ ಕಿರುಚಿತ್ರದ ಹೆಸರು ಹಾಗೂ ಪೋಸ್ಟರ್ ಸೆಪ್ಟೆಂಬರ್ 5 ರಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ ಬಿಡುಗಡೆಗೊಂಡಿತು.

ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಚಿತ್ರರಂಗದ ಕಡೆ ಹೆಚ್ಚು ಒಲವನ್ನು ಇಟ್ಟುಕೊಂಡಿರುವ ಶರತ್ ಇವರು ತಾವೇ ಸ್ವತಃ ಕಥೆ ರಚಿಸಿದ್ದು, ಎಡಿಟಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಿತಿನ್ ಕಾನಾವುರವರ ಕೈ ಚಳಕದಲ್ಲಿ ವೀಡಿಯೋ ಗ್ರಾಫಿ ಹಾಗೂ ಎಡಿಟಿಂಗ್ ಮೂಡಿ ಬಂದಿದ್ದು, ಈ ಕಿರುಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ಧ್ವನಿಗಾರೂಡಿಕೆಯ ಅಪೂರ್ವ ಪ್ರತಿಭೆ, ಕಲಾವಿದೆ ಸಾಯಿಶ್ರುತಿ ಪಿಲಿಕಜೆ ಮತ್ತು ಬಾಲ ಕಲಾವಿದ ಪೂರ್ವ ಗೌಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ತಂಡ, ಹೊಸ ಕಥೆ, ಹೊಸತನದೊಂದಿಗೆ ಶೀಘ್ರದಲ್ಲೇ ಬರಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!