Ad Widget

ಲಾಕ್ ಡೌನ್ ಸಡಿಲಿಕೆ ಇದ್ದರೂ ಜನರಲ್ಲಿ ನಿಲ್ಲದ ಭಯ -ಕೊರೊನ ಮಹಾಮಾರಿ ವೈರಸ್ಸಿನಿಂದ ಎಲ್ಲೆಲ್ಲಿಯೂ ಮೌನ

ಮಹಾಮಾರಿ ಕೊರೋನ ವೈರಸ್ ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿದೆ. ಕಳೆದ ಎರಡು ತಿಂಗಳಿನಿಂದ ಹಲವಾರು ರೀತಿಯ ಸಂಕಷ್ಟಗಳನ್ನು ಜನಸಾಮಾನ್ಯರು ಎದುರಿಸಿದ್ದರು . ಆದರೆ ಕಳೆದ ಒಂದು ವಾರದಿಂದ ಲಾಕ್ ಡೌನ್ ಸಡಿಲಿಕೆಯ ಕ್ರಮಗಳನ್ನು ಕೈಗೊಂಡಿದೆ. ಇದರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರಯಾಣಿಸಲು ಬಸ್ಸಿನ ಸೌಲಭ್ಯಗಳನ್ನು ಒದಗಿಸಿ ಬಸ್ಸುಗಳನ್ನು ರಸ್ತೆಗೆ ಇಳಿಸಲಾಯಿತು. ಆದರೆ ಬಸ್ಸಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಇಲ್ಲದೆ ಬಸ್ಸುಗಳು ಖಾಲಿ ಖಾಲಿಯಾಗಿ ಕಂಡುಬರುತ್ತಿದೆ. ಸುಳ್ಯದಿಂದ ಪುತ್ತೂರಿಗೆ ಒಂದು ಬಸ್ಸು ಸಂಚರಿಸಿ ಬರುವಷ್ಟರಲ್ಲಿ ಕೇವಲ 700 ರೂಪಾಯಿ ಅಥವಾ 900 ರೂಪಾಯಿಗಳ ಕಲೆಕ್ಷನ್ ಬರುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಜನತೆಯಲ್ಲಿರುವ ವೈರಸ್ಸಿನ ಭಯ . ಈ ಭಯ ಇರುವ ಹಿನ್ನೆಲೆಯಲ್ಲಿ ಜನತೆಯು ವಿನಾಕಾರಣ ತಮ್ಮ ತಮ್ಮ ಮನೆಗಳಿಂದ ಹೊರ ಬರಲು ಹಿಂಜರಿಯುತ್ತಿರುವುದು ಕಂಡುಬರುತ್ತದೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!