ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ದೇಶದ ಜನತೆಗೆ ಆರ್ ಬಿ ಐ ಇಂದು ಸಿಹಿ ಸುದ್ದಿ ನೀಡಿದೆ. ಸಾಲದ ಮೇಲಿನ ಬಡ್ಡಿದರ ಇಳಿಕೆ, ಇ ಎಮ್ ಐ ಪಾವತಿಯ ಅವಧಿಯನ್ನು ಮತ್ತೆ ಮೂರು ತಿಂಗಳಿಗೆ ವಿಸ್ತರಣೆ ಮಾಡುವುದಾಗಿ ಘೋಷಿಸಿದೆ. ಆರ್ ಬಿ ಐ ಮುಖ್ಯಸ್ಥ ಮೇ. ೨೨ ರಂದು ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಘೋಷಿಸಿದ್ದಾರೆ. ಸಾಲದ ಕಂತು ಮರುಪಾವತಿಯಡ ಅವಧಿಯನ್ನು ಈ ಹಿಂದೆ ಮೂರು ತಿಂಗಳುಗಳ ಕಾಲ ವಿಸ್ತರಿಸಿತ್ತು. ಇದೀಗ ಮತ್ತೆ ಮೂರು ತಿಂಗಳುಗಳ ವಿಸ್ತರಣೆ ಮಾಡಿ ಆ. ೩೧ ರವರೆಗೆ ಮುಂದೂಡಿದೆ. ರೆಪೋ ದರ ಕಡಿತ ಮಾಡಿರುವುದರಿಂದ ಗೃಹ ,ವಾಹನ ಹಾಗೂ ವೈಯುಕ್ತಿಕ ಸಾಲಗಳ ಬಡ್ಡಿ ವಿನಾಯಿತಿ ಸಿಗಲಿದೆ ಎಂದು ಘೋಷಿಸಿದ್ದಾರೆ.
- Friday
- November 22nd, 2024