ಕರೋನದಿಂದ ಇಡೀ ದೇಶ ಹಾಗೂ ಜಗತ್ತಿನ ಎಲ್ಲ ಭಾಗಗಳಲ್ಲಿ ಜನರ ಎಲ್ಲಾ ಚಟುವಟಿಕೆಗಳು, ವಿದ್ಯಾರ್ಥಿಗಳ ಕಲಿಕೆಗಳು ಬೌದ್ಧಿಕ ತರಗತಿಗಳು ನಡೆಯದೇ ಆನ್ಲೈನ್ ಶಿಕ್ಷಣಕ್ಕೆ ಸರ್ಕಾರಗಳು ಹೆಚ್ಚಿನ ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ 1 ರಿಂದ ದ್ವಿತೀಯ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪ್ರತಿದಿನ ಸಂವೇದ ತರಗತಿಗಳು ನಡೆಯುತ್ತಿವೆ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅಭಾವದಿಂದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ವೀಕ್ಷಿಸಿಸಲು ಅನಾನುಕೂಲವಾಗುದನ್ನು ಮನಗಂಡು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಚ್ರಪ್ಪಾಡಿ ಇಲ್ಲಿನ 1 ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ನಲಿ-ಕಲಿ ಹಾಗೂ 4ನೇ ಹಾಗೂ 5ನೇ ತರಗತಿ ವಿದ್ಯಾರ್ಥಿಗಳಿಗೆ ನೇರವಾಗಿ ಶಾಲೆಯಲ್ಲೆ ಸಂವೇದ ತರಗತಿಗಳನ್ನು ವೀಕ್ಷಿಸಿಸಲು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ವೇಣುಗೋಪಾಲ್ ಇವರ ಸಹೋದರರಾದ ಪುಷ್ಪರಾಜ ಕುಂಪಲ ಉದ್ಯಮಿ ದುಬೈ ಹಾಗೂ ಪ್ರವೀಣ್ ಕುಮಾರ್ ನೇಷನಲ್ ಇನ್ಸ್ಟ್ರುಮೆಂಟ್ ಸಾಫ್ಟ್ವೇರ್ ಇಂಜಿನಿಯರ್, ಇವರು ಶಾಲೆಗೆ ಸುಮಾರು 40000 ಸಾವಿರ ಮೌಲ್ಯದ ಟಿವಿ ಹಾಗೂ ಇನ್ವರ್ಟರ್ ಕೊಡುಗೆಯಾಗಿ ನೀಡಿದರು ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜನಾರ್ದನ. ಎ , ಶಾಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಾಬುಗೌಡ, ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ವೇಣುಗೋಪಾಲ್,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಂದರಿ ಹಾಗೂ ಪೋಷಕರು ಉಪಸ್ಥಿತರಿದ್ದರು.
- Thursday
- November 21st, 2024