ಕಲ್ಲುಗುಂಡಿ ಅತಿಥಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ ಬಾರಿನಲ್ಲಿ ಮದ್ಯ ಸೇವಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ತೆರಳಿದ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರು ಬಾರಿನ ಮ್ಯಾನೇಜರ್ ನ ಮೇಲೆ ದೌರ್ಜನ್ಯ ಮಾಡಿದ್ದಾರೆಂದ ಆರೋಪಿಸಿ ಬಾರಿನ ಮಾಲಕ ಸುಧೀರ್ ಶೆಟ್ಟಿ ನೆಟ್ಟಣ ಅವರು ಡಿವೈಎಸ್ಪಿ ಅವರಿಗೆ ಮೌಕಿಕ ದೂರು ಸಲ್ಲಿಸಿದ ಘಟನೆ ಮೇ 21ರಂದು ನಡೆದಿದೆ.
ಘಟನೆಯ ವಿವರ, ದೇಶದಾದ್ಯಂತ ಲಾಕ್ಡೌನ್ ನಿಯಮ ಜಾರಿಯಲ್ಲಿದ್ದು ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಸಡಲಿಕೆ ಹಿನ್ನೆಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯ ಸೇವಿಸಲು ಅವಕಾಶ ನೀಡದೆ ಕೇವಲ ಪಾರ್ಸೆಲ್ ಕೊಂಡೊಯ್ಯಲು ನಿಯಮವನ್ನು ರೂಪಿಸಿದೆ.ಕಲ್ಲು ಗುಂಡಿಯಲ್ಲಿರುವ ಅತಿಥಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಈ ನಿಯಮವನ್ನು ಉಲ್ಲಂಘಿಸಿ ಬಾರಿನಲ್ಲಿ ಕುಡಿಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆಂದು ಸರ್ಕಲ್ ಇನ್ಸ್ಪೆಕ್ಟರ್ ಪೊಲೀಸ್ ಸಿಬ್ಬಂದಿ ಗಳೊಂದಿಗೆ ಮೇ 21ರಂದು ಪರಿಶೀಲನೆಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಬಾರಿನ ಒಳಭಾಗದಿಂದ ಸುಮಾರು 70 ವರ್ಷದ ವೃದ್ಧರೊಬ್ಬರು ಮದ್ಯ ಸೇವಿಸಿ ಹೊರಬರುತ್ತಿರುವುದು ಪೊಲೀಸರಿಗೆ ಕಂಡುಬಂದಿದೆ ಎಂದು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಅವರು ಬಾರಿನ ಮ್ಯಾನೇಜರ್ ರವರನ್ನು ಗದರಿಸಿ ಈ ರೀತಿಯ ಘಟನೆಗಳು ಮುಂದಕ್ಕೆ ನಡೆಯಬಾರದು ಎಂದು ತಾಕೀತು ಮಾಡಿದ್ದಾರೆ. ಆದರೆ ಬಾರಿನ ಮ್ಯಾನೇಜರ್ ಈ ರೀತಿ ಯಾವುದೇ ಘಟನೆ ನಡೆಯಲಿಲ್ಲ ನಾವು ಕಾನೂನಿನ ನಿಯಮವನ್ನುಮೀರಿ ಯಾವುದೇ ಕೆಲಸವನ್ನು ಇಲ್ಲಿ ಮಾಡುತ್ತಿಲ್ಲ .ಅವರಿಗೆ ಪಾರ್ಸಲ್ ಕೊಟ್ಟಿದ್ದೇವೆ ವಿನಃ ಅವರಿಗೆ ಮಧ್ಯವನ್ನು ಸೇವಿಸಲು ಅವಕಾಶ ನೀಡಲಿಲ್ಲ ಎಂದು ಹೇಳಿದರು ಎನ್ನಲಾಗಿದೆ. ಈ ವಿಷಯದ ಕುರಿತು ಸರ್ಕಲ್ ಇನ್ಸ್ಪೆಕ್ಟರ್
ಹಾಗೂ ಬಾರಿನ ಮ್ಯಾನೇಜರಿಗೆ ಪರಸ್ಪರ ಮಾತುಕತೆ ನಡೆದು ನಂತರ ಬಾರಿನ ಮ್ಯಾನೇಜರ್ ನಾನು ಕೂಡ ನಿವೃತ್ತ ಸೇನಾನಿ ನನಗೂ ಕೂಡ ಕಾನೂನಿನ ಅರಿವಿದೆ ಅದರಿಂದ ನಾನು ಯಾವುದೇ ರೀತಿಯ ಕಾನೂನುಬಾಹಿರವಾದ ಕೆಲಸವನ್ನು ಇಲ್ಲಿ ಮಾಡಲಿಲ್ಲ ಎಂದು ಹೇಳಿದಾಗ ಅದನ್ನು ಕೇಳದೆ ಸರ್ಕಲ್ ಇನ್ಸ್ಪೆಕ್ಟರ್ ನನ್ನಮೇಲೆ ದೌರ್ಜನ್ಯವನ್ನು ಮಾಡಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಬಾರಿನ ಮಾಲಕರಿಗೆ ವಿಷಯವನ್ನು ತಿಳಿಸಿರುತ್ತಾರೆ. ಈ ವಿಷಯವನ್ನು ತಿಳಿದ ಬಾರಿನ ಮಾಲಕ ಸುಧೀರ್ ಶೆಟ್ಟಿ ನೆಟ್ಟಣ ಅವರು ಡಿವೈಎಸ್ಪಿ ದಿನಕರ ಶೆಟ್ಟಿ ಅವರಿಗೆ ಸರ್ಕಲ್ ಇನ್ಸ್ಪೆಕ್ಟರ್ ನ ವಿರುದ್ಧ ಮೌಕಿಕ ದೂರನ್ನು ನೀಡಿರುತ್ತಾರೆ ಎಂದು ತಿಳಿದುಬಂದಿದೆ.
ಈ ವಿಷಯದ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ನವೀನಚಂದ್ರ ಜೋಗಿಯವರು ನಾನು ಸ್ಥಳ ಪರಿಶೀಲನೆಗೆ ಹೋಗಿದ್ದು ನಿಜ ಆ ಸಂದರ್ಭದಲ್ಲಿ ರೆಸ್ಟೋರೆಂಟಿನ ಒಳಗಡೆ ಟೇಬಲಿನ ಮೇಲೆ ಮದ್ಯ ಸೇವಿಸಿದ ದೃಶ್ಯ ಕಂಡುಬಂದಿದೆ ಇಬ್ಬರು ಗ್ರಾಹಕರು ಬರುತ್ತಿರುವುದು ಕೂಡ ನಮ್ಮ ಗಮನಕ್ಕೆ ಬಂದಿದೆ ಇದನ್ನು ಪ್ರಶ್ನಿಸಿ ಬಾರಿನ ಮ್ಯಾನೇಜರ್ ನ ಬಳಿ ಕೇಳಿದಾಗ ಆ ರೀತಿಯ ಘಟನೆಗಳು ನಡೆದೇ ಇಲ್ಲ ಎಂದು ಪಟ್ಟುಹಿಡಿದು ಚರ್ಚಿಸಲು ಮುಂದಾದಾಗ ಅವರನ್ನು ಗದರಿಸಿ ರುವುದು ನಿಜ. ಅದು ನನ್ನ ಕರ್ತವ್ಯ ಕೂಡ ಹೌದು. ಆದರೆ ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯವನ್ನು ಮಾಡಲಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಅದೇ ರೀತಿ ಬಾರಿನ ಮಾಲಕರೊಂದಿಗೆ ದೂರವಾಣಿ ಮೂಲಕ ವಿಷಯವನ್ನು ಕೇಳಿದಾಗ ಪೊಲೀಸ್ ಅಧಿಕಾರಿಯ ಮೇಲೆ ನಮಗೆ ಯಾವುದೇ ರೀತಿಯ ದ್ವೇಷ ಇಲ್ಲ. ಅವರು ತಮ್ಮ ಕರ್ತವ್ಯವನ್ನು ಮಾಡಿರುತ್ತಾರೆ. ಅದು ಅಲ್ಲದೆ ಸರ್ಕಲ್ ಇನ್ಸ್ಪೆಕ್ಟರ್ ರವರು ಉತ್ತಮ ಅಧಿಕಾರಿ ಕೂಡ ಹೌದು.ಅವರು ತಪಾಸಣೆಗೆ ಬಂದಿದ್ದ ರಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಆದರೆ ಅವರು ಬಂದು ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಆರೋಪಿಸಿದರು. ನಾನು ಸ್ಥಳದಲ್ಲಿ ಇಲ್ಲದಿದ್ದರೂ ಅಲ್ಲಿ ನಡೆದ ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾದದ್ದು ನಮ್ಮ ಸಿಬ್ಬಂದಿಗಳು ನನಗೆ ವಾಟ್ಸಪ್ ಮೂಲಕ ಕಳುಹಿಸಿದಾಗ ವಿಷಯ ತಿಳಿದು ಇದರ ಬಗ್ಗೆ ಡಿವೈಎಸ್ಪಿಗೆ ದೂರನ್ನು ನೀಡಿರುತ್ತೇನೆ ಎಂದು ಹೇಳಿದರು.
- Thursday
- November 21st, 2024