ಈ ಸಂಕಷ್ಟದ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೆಲವೊಂದು ಯೋಜನೆಗಳನ್ನು ಪ್ಯಾಕೇಜ್ ಮೂಲಕ ಘೋಷಿಸಿರುವುದನ್ನು ಸ್ವಾಗತಿಸುವುದಾದರೂ ಅದರ ಸಾಧಕ ಭಾದಕ ಮತ್ತು ಅದರ ಜಾರಿ ಹಿನ್ನಲೆಯ ಬಳಿಕವಷ್ಟೇ ಯೋಜನೆಯ ಪ್ರಾಮುಖ್ಯತೆ ಜನರಿಗೆ ತಿಳಿಯಬಹುದು.
ವಾಸ್ತವವಾಗಿ ಜನ ಸಾಮಾನ್ಯ ಈ ಮೂರು ತಿಂಗಳ ಅವಧಿಯಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಮಾತನಾಡುತ್ತಿರುವುದೇ ಹೆಚ್ಚು. ಉದಾಹರಣೆಗೆ ಲಾಕ್ ಡೌನ್ ಮಾಡುವ ವೇಳೆ 24/3/2020 ರಂದು ಮೊದೀಜಿಯವರ ಭಾಷಣದಲ್ಲಿ ನೀವು ಯಾರೂ ಹೆದರಬೇಡಿ ನಿಮ್ಮ ಮೂರು ತಿಂಗಳ EMI ಮುಂದೂಡಲ್ಪಡುತ್ತದೆ. ಮತ್ತು ಅದಕ್ಕೆ ಬಡ್ಡಿ ಕಟ್ಟುವ ಅಗತ್ಯವಿಲ್ಲ , ಹಾಗೇ ಎಲ್ಲಾ ಸರಕಾರಿ ಪಾವತಿಗಳು ಕೂಡಾ 3 ತಿಂಗಳ ಮಟ್ಟಿಗೆ ಮುಂದೂಡಲ್ಪಡುತ್ತವೆ. ಮತ್ತು ಅದಕ್ಕೆ ಬಡ್ಡಿ ಸಂದಾಯ ಮಾಡುವ ಅಗತ್ಯತೆ ಇಲ್ಲಾ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದನ್ನು ನಂಬಿದ ಜನ ಸಾಮಾನ್ಯ ಮುಂದೆ ನಮ್ಮ EMI ಗೆ ಬಡ್ಡಿ ಇರಲ್ಲ ಹಾಗೇ ಸರಕಾರಿ ಪಾವತಿಗಳಿಗೂ ಬಡ್ಡಿ ಇರಲ್ಲ ಎಂದು ನಂಬಿದ್ದರು. ಆದರೆ ಅಸಲಿ ಸಮಸ್ಯೆಯೇ ಪ್ರಾರಂಭವಾಗುವುದು ಇಲ್ಲಿಂದ. ಈಗ 2 ತಿಂಗಳು ವಿದ್ಯುತ್ ಬಿಲ್ಲನ್ನೇ ಸಹಿಸಲಾಗುವುದಿಲ್ಲ. ಮುಂದೆ 3 ತಿಂಗಳ EMI ಮೇಲಿನ ಬಡ್ಡಿ ಮತ್ತು ಮೂಲ ಕಂತಿನ ಹಣ ಸಂದಾಯ ಸಮಯ ಜನರ ಸಮಸ್ಯೆ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುವುದನ್ನು ಊಹಿಸಲು ಅಸಾಧ್ಯ. ಹಾಗಾಗೀ ನಾವು ಸರಕಾರಗಳನ್ನು ಒತ್ತಾಯಿಸುವುದೇನೆಂದರೇ ನಿಮ್ಮ ಪ್ಯಾಕೇಜ್ ಘೋಷಣೆಗಳ ಫಲಿತಾಂಶ ಸಿಗುವ ಕಾಲ ತುಂಬಾ ದೂರ ಇದೆ. ಹಾಗಾಗೀ ನೀವು ಮಾರ್ಚ್ ನಿಂದ ಜೂನ್ ತನಕದ ಎಲ್ಲಾ EMI ಮೂಲ ಕಂತಿನ ಹಣ ಹಾಗೂ ಬಡ್ಡಿ ಮತ್ತು ಸರಕಾರಿ ಪಾವತಿಗಳು ಅದರ ಬಡ್ಡಿ ಸಮೇತ ಮನ್ನಾ ಮಾಡಬೇಕು.
ಹಾಗಾದಾಗ ಮಾತ್ರ ಕೊರೋನ ಸಂಕಷ್ಟದಲ್ಲಿದ್ದ ಜನತೆ ತಾತ್ಕಲಿಕವಾಗಿ ನಿಟ್ಟುಸಿರು ಬಿಡಬಹುದು ಎಂಬುದಾಗಿ ನಾವು ನಿರೀಕ್ಷಿಸುತ್ತೇವೆ. ಈ ವಾಸ್ತವ ಸಂಗತಿಗಳನ್ನು ನಮ್ಮ ಸರಕಾರಗಳು ಅರಿತು ಕೊಳ್ಳುವಲ್ಲಿ ವಿಫಲವಾಗಿದ್ದವೆ ಎಂದು ಹೇಳಿದರೆ ತಪ್ಪಾಗಲಾರದು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Saturday
- November 23rd, 2024